ಯುವ ರಾಜಕಾರಣಿಗಳಿಗೆ ಅಟಲ್ ಆದರ್ಶ

25 HRP 02
ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಸುಶಾಸನ ದಿನಾಚರಣೆ ಅಂಗವಾಗಿ ಹಣ್ಣು-ಪಂಪಲ ವಿತರಿಸಲಾಯಿತು. ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಿಹಳ್ಳಿ ಮಂಜುನಾಥ, ಮಂಡಲ ಉಪಾಧ್ಯಕ್ಷ ಮುದುಕವ್ವನವರ ಶಂಕರ್, ಪ್ರಮುಖರಾದ ನಂಜನಗೌಡ, ಜೆ.ಓಂಕಾರ ಗೌಡ, ಬಿ.ವೈ.ವೆಂಕಟೇಶ ನಾಯ್ಕ, ಸ್ವಪ್ನಾ ಮಲ್ಲಿಕಾರ್ಜುನ, ಕೆ.ಮಂಜುಳಾ, ಭದ್ರಿನಾರಾಯಣ, ಮಟ್ಟಿ ನಾಗನಂದ ಇತರರಿದ್ದರು.
Published on

ಹರಪನಹಳ್ಳಿ: ಯುವ ರಾಜಕಾರಣಿಗಳು ಅಟಲ್ ಬಿಹಾರಿ ವಾಜಪೇಯಿ ಆದರ್ಶಗಳನ್ನು ಪಾಲಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಣ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸುಶಾಸನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬೆಳೆದಿದೆ. ಈ ಬೆಳವಣಿಗೆಗೆ ಅಟಲ್ ಭದ್ರ ಬುನಾದಿಯೇ ಕಾರಣ. ಅಂದು ದೃಢ ನಿರ್ಧಾರ ಹಾಗೂ ನಿಲುವುಗಳಿಂದ ರಾಜಕೀಯ ಅವಮಾನಗಳಿಗೆ ಕುಗ್ಗದೆ ಪಕ್ಷ ಬೆಳೆಸಿದರು ಎಂದರು.

ಮಂಡಲ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಮಾತನಾಡಿ, ವಾಜಪೇಯಿ ಸಮಾಜದ ಸೇವೆಯಲ್ಲಿ ರಾಜಕಾರಣ ಮಾಡಿದವರು. ಎಲ್ಲ ಪಕ್ಷದವರಿಗೂ ಅವರ ವ್ಯಕ್ತಿತ್ವ ಇಷ್ಟವಾಗುವಂಥ ಗುಣವುಳ್ಳವರಾಗಿದ್ದರು. ಅಧಿಕಾರಾವಧಿಯಲ್ಲಿ ಫೋಕ್ರಾನ್ ಅಣ್ವಸ್ತ್ರ ಪ್ರಯೋಗ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ , ಸರ್ವ ಶಿಕ್ಷಣ ಅಭಿಯಾನ ಮುಂತಾದ ಮಹತ್ವದ ಯೋಜನೆಗಳಿಂದ ಜಗತ್ತು ಗಮನಿಸುವ ದೇಶವನ್ನಾಗಿ ಮಾಡಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net