ಮೈಸೂರು: ಮಹಿಳೆಯೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ರಾಜಕೀಯ ಪಕ್ಷವೊಂದರ ಯುವ ಮುಖಂಡನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾಲಿಗ್ರಾಮದ ಲೋಹಿತ್ ಬಂಧಿತ ಆರೋಪಿ. ಖಾಸಗಿ ವಿಡಿಯೋ ಲೀಕ್ ಮಾಡಿದವರ ಪತ್ತೆಗೆ ಜಿಲ್ಲಾ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಜಮೀನಿನ ದಾರಿ ವಿಚಾರದಲ್ಲಿ ಜಗಳವಾಗಿದ್ದು, ಆಗಾಗ್ಗೆ ಗಲಾಟೆಯಾಗಿತ್ತು. ಈ ವೇಳೆ ನಿಮ್ಮ ಕುಟುಂಬಕ್ಕೆ ಗತಿ ಕಾಣಿಸುತ್ತೇನೆ. ಕೊಲೆ ಮಾಡದೇ ಬಿಡುವುದಿಲ್ಲ ಎಂದು ಆರೋಪಿ ಬೆದರಿಕೆ ಹಾಕಿದ್ದ ಎಂದು ನೊಂದ ಮಹಿಳೆಯ ತಂದೆ ಮೈಸೂರು ಜಿಲ್ಲಾ ಸೆನ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅದಕ್ಕಾಗಿ ನನ್ನ ಮಗಳೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದು, ವಿಡಿಯೋವನ್ನು ಎಲ್ಲರಿಗೂ ಕಳುಹಿಸುವ ಮೂಲಕ ನನ್ನ ಹಾಗೂ ನನ್ನ ಮಗಳ ಸಂಸಾರವನ್ನು ಹಾಳು ಮಾಡಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.