ಜೂಜಾಟ ಆಡಿಸುತ್ತಿದ್ದ ಯುವಕರು ಅಂದರ್

Playing Cards
Published on

ನರಗುಂದ: ಜೂಜಾಟ, ಮಟ್ಕಾ ಆಡುತ್ತಿದ್ದ ಇಬ್ಬರು ಯುವಕರನ್ನು ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸೋಮವಾರ ಪೊಲೀಸರು ಬಂಧಿಸಿದ್ದಾರೆ. ರಾಚಣ್ಣ ಮಲ್ಲಿಕಾರ್ಜುನ ಕಿರಗಿ (27) ಹಾಗೂ ಅಭಿಷೇಕ ಸುಭಾಸ ಹರ್ತಿ (27) ಬಂಧಿತರು. ಕೊಣ್ಣೂರಿನ ಹಳೇ ಬಸ್ ನಿಲ್ದಾಣ ಹತ್ತಿರ ಬರುತ್ತಿದ್ದ ಸಾರ್ವಜನಿಕರನ್ನು ಕರೆದು ಅದೃಷ್ಟ ಸಂಖ್ಯೆಗಳ ಮೇಲೆ ಹಣ ಕಟ್ಟುವಂತೆ ಈ ಇಬ್ಬರು ಹೇಳುತ್ತಿದ್ದರು. ಅದೃಷ್ಟ ಒಲಿದರೆ 1 ರೂ.ಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರ ಮನವೊಲಿಸಿ ಆಟವಾಡಿಸುತ್ತಿದ್ದರು. ಕೊಣ್ಣೂರ ಹೊರ ಠಾಣೆ ಸಿಎಚ್‌ಸಿ ಎಸ್.ವಿ. ನಾಯ್ಕರ್ ನೀಡಿದ ಖಚಿತ ಮಾಹಿತಿ ಆಧರಿಸಿ ನರಗುಂದ ಪೊಲೀಸ್ ಠಾಣೆ ಎಎಸ್‌ಐ ಡಿ.ಕೆ. ಹಾಲವರ ಇಬ್ಬರನ್ನೂ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net