

ಹೂವಿನಹಡಗಲಿ: ತಾಲೂಕಿನ ವಿವಿಧೆಡೆ ಶನಿವಾರ ಹೋಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ತೇರುಹನುಮಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಹೋಳಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಯುವಕರು ಡಿಜೆ ಹಾಡಿಗೆ ಕುಣಿದು, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಇದನ್ನೂ ಓದಿ:ಬಣ್ಣದಲ್ಲಿ ಮಿಂದೆದ್ದ ಯುವಪಡೆ
ಓಂ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಕಾಮಣ್ಣನ ಮೂರ್ತಿಯನ್ನು ಶುಕ್ರವಾರ ರಾತ್ರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶನಿವಾರ ಬೆಳಗ್ಗೆ ದಹನ ಮಾಡಲಾಯಿತು. ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಜತೆಗೆ ಹಲಗೆ ಬಾರಿಸುತ್ತ ಹೆಜ್ಜೆ ಹಾಕಿ ಹೋಳಿ ಆಚರಿಸಿದರು. ಹೋಳಿ ಆಚರಣೆಯ ನಂತರ ತಾಲೂಕಿನ ನದಿ ತೀರದ ಪ್ರದೇಶದಲ್ಲಿ ಯುವಕರು ಸ್ನಾನ ಮಾಡಿ ಭೋಜನ ಸವಿದರು. ಮುಂಜಾಗೃತಿ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು.