

ರಬಕವಿ/ಬನಹಟ್ಟಿ: ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ರಭಸದಿಂದ ಹರಿದು ಬರುತ್ತಿದೆ. ನೀರಿನ ಸೆಳೆತವೂ ಹೆಚ್ಚಿದ್ದರಿಂದ ಯುವಕರು ಈಜುವುದು, ಬಟ್ಟೆ ತೊಳೆಯುವುದು ಹಾಗೂ ಮೀನುಗಾರರು ನದಿಗೆ ಇಳಿಯಬಾರದೆಂದು ರಬಕವಿ ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾಧಿ ತಿಳಿಸಿದ್ದಾರೆ.
ನೀರಿನ ಸೆಳೆತ ಹೆಚ್ಚಿದ ಕಾರಣ ರಬಕವಿ ಮಹಿಷವಾಡಗಿ ನದಿ ಮಾರ್ಗದಲ್ಲಿರುವ ಬೋಟ್ ಸೇವೆಯೂ ರದ್ದುಪಡಿಸಲಾಗಿದೆ. ಇಂಥಹ ಸಂದರ್ಭ ಯುವಕರು ನೀರಿಗಿಳಿದು ನೀರಿನ ಸೆಳೆತಕ್ಕೆ ಹರಿದು ಹೋಗುವ ಸಾಧ್ಯತೆಗಳಿವೆ. ನಿಮ್ಮ ಪರಿವಾರದ ಹಿತದೃಷ್ಠಿಯಿಂದ ನಿಮ್ಮ ಜೀವನಕ್ಕೆ ಹಾನಿ ಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಪ್ರವಾಹದ ಭೀತಿ ಇಲ್ಲವಾದರೂ ನೀರಿನ ಹರಿವು ಹೆಚ್ಚಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ. ಆದ್ದರಿಂದ ತೀರದ ಜನರು ಜಾಗೃತೆಯಿಂದರಬೇಕೆಂದು ತಿಳಿಸಿದರು.
ತಾಲೂಕು ಆಡಳಿತ ಪ್ರವಾಹ ಸಿದ್ಧತೆ ಮಾಡಿಕೊಂಡಿದೆ. ಕ್ಷಣ ಕ್ಷಣದ ಮಾಹಿತಿ ಕಲೆಹಾಕುತ್ತಲೇ ಇರುತ್ತೇವೆ. ತೊಂದರೆಗಳೇನಾದರೂ ಕಂಡುಬಂದರೆ ತಕ್ಷಣ ತಮ್ಮ ತಮ್ಮ ಗ್ರಾಮಕ್ಕೆ ಅಧಿಕಾರಿಗಳು ಬಂದಾಗ ತಿಳಿಸಿದ ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಸಂಪರ್ಕಿಸಬೇಕೆಂದು ತಿಳಿಸಿದರು.