ಯುವ ಜನತೆಗೆ ಸಮಾಜಿಕ ಜವಾಬ್ದಾರಿ ಕಳಕಳಿಯಿರಲಿ

20 ckm 1
ಚಿಕ್ಕಮಗಳೂರು ತಾಲೂಕಿನ ಅರಿಸಿನಗುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವತಿಯಿಂದ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ವಾರ್ಷಿಕೋತ್ಸವ ಸಮಾರಂಭ ನಡೆಸಲಾಯಿತು. ಡಾ. ಸಿ.ಕೆ.ಸುಬ್ಬರಾಯ, ಡಾ. ಸಿ.ಟಿ.ಜಯದೇವ, ಡಾ. ಕೆ.ಎಸ್.ಪ್ರಕಾಶ್ ರಾವ್, ರಾಕೇಶ್ ಹೊಸಮನಿ, ತನುಜಾ, ಚಂದ್ರಶೇಖರ್ ಮತ್ತಿತರರಿದ್ದರು.
Published on

ಯುವಜನರು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಕಳಕಳಿಯನ್ನು ಹೊಂದಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿ.ಕೆ.ಸುಬ್ಬರಾಯ ಹೇಳಿದರು.

ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವತಿಯಿಂದ ತಾಲೂಕಿನ ಅರಿಸಿನಗುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟಿçÃಯತೆ ವಿಚಾರದಲ್ಲಿ ಯುವಕರು ಚಿಂತನೆ ನಡೆಸಬೇಕು. ನಮ್ಮ ದೇಶಕ್ಕಾಗಿ ನಾವು ಎಂಬ ಹೆಮ್ಮೆ ನಮ್ಮಲ್ಲಿರಬೇಕು. ಇದರ ಜೊತೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವ ಕಡೆಗೂ ಒತ್ತು ನೀಡಬೇಕು. ಅದಕ್ಕಾಗಿ ಇಂತಹ ಪರಿಸರದಲ್ಲಿ ಬೆರೆಯಬೇಕು. ಸಂಘಟಿತರಾಗಿ, ಸಾಮೂಹಿಕವಾಗಿ ಒಂದೆಡೆ ಕಲೆತು ಹಳ್ಳಿಗಳಲ್ಲಿರುವ ಕಷ್ಟ ಸುಖಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಿಸಿನಗುಪ್ಪೆ ಸರ್ಕಾರಿ ಶಾಲೆ ೧೯೫೩ರಲ್ಲೇ ಆರಂಭವಾಗಿದೆ. ನಮ್ಮ ಹಿರಿಯರು ನಮಗೆ ಸ್ವಾತಂತ್ರö್ಯ ಬಂದ ತಕ್ಷಣವೇ ಯೋಚನೆ ಮಾಡಿ ಇಲ್ಲಿಗೆ ಒಂದು ಶಾಲೆ ನೀಡಿದ್ದಾರೆ. ಅಲ್ಲಿಂದ ಅವಿರತವಾಗಿ ಎಷ್ಟೋ ಮಂದಿ ಇಲ್ಲಿ ಕಲಿತಿದ್ದಾರೆ. ಅವರಿಗೆಲ್ಲ ಕನಿಷ್ಟ ಪ್ರಾಥಮಿಕ ಹಂತದ ಸಾಕ್ಷರತೆ ಬಂದಿರುವುದಕ್ಕೆ ನಮಗೆಲ್ಲ ಹೆಮ್ಮೆಯಿದೆ ಎಂದರು.
ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ ಮಾತನಾಡಿ, ಎಐಬಿಎಂ ಹಲವು ವರ್ಷಗಳಿಂದ ಎನ್‌ಎಸ್‌ಎಸ್ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಮುದಾಯಕ್ಕಾಗಿ ಸೇವೆ ಎನ್ನುವುದು ಶಿಬಿರದ ಮೂಲ ಉz್ದೆÃಶ. ಯಾವುದೇ ಕ್ಷಣದಲ್ಲಿ ಕರೆದರೂ ನಾವು ಸೇವೆಗೆ ಸದಾ ಸಿದ್ಧ ಎನ್ನುವುದನ್ನು ಶಿಬಿರದಲ್ಲಿ ಕಲಿಸಲಾಗುತ್ತದೆ ಎಂದು ಹೇಳಿದರು.
ಕಾಲೇಜಿನಲ್ಲಿ ಕಲಿಯುವುದನ್ನು ಹೊರತುಪಡಿಸಿ ಪರಿಸರ ಸಂರಕ್ಷಣೆ, ಸ್ವಚ್ಛತೆ ಸೇರಿದಂತೆ ವಿವಿಧ ಸಾಮಾಜಮುಖಿ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಬಹುದು. ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಯಾವುದೇ ಜಾತಿ, ಮತ, ಪಂಥಗಳಿರುವುದಿಲ್ಲ. ಇಲ್ಲಿ ಎಲ್ಲರೂ ಒಂದೇ. ಸಮುದಾಯವನ್ನು ಹೇಗೆ ಬೆಳೆಸಬೇಕು. ಗ್ರಾಮದ ಪರಿಸ್ಥಿತಿ ಹೇಗಿದೆ. ಇನ್ನಷ್ಟು ಅಭಿವೃದ್ಧಿಗೆ ಏನು ಮಾಡಬಹುದು. ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳು ಏನು ಮಾಡಬಹುದು ಎನ್ನುವುದನ್ನು ಸಮಾಲೋಚಿಸಲು ಶಿಬಿರವು ಉತ್ತಮ ವೇದಿಕೆ ಎಂದರು.
ಎಐಬಿಎAನ ಪ್ರಾಚಾರ್ಯ ಡಾ. ಕೆ.ಎಸ್.ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಕಾರ್ಯಕ್ರಮಾಧಿಕಾರಿ ರಾಕೇಶ್ ಹೊಸಮನಿ, ಸಹ ಶಿಬಿರಾಧಿಕಾರಿ ತನುಜಾ, ಅರಿಸಿನಗುಪ್ಪೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ್, ಕಾಫಿಬೆಳೆಗಾರ ಜಯಕೀರ್ತಿ, ಗ್ರಾಪಂ ಅಧ್ಯಕ್ಷ ದೀಪಕ್, ಸದಸ್ಯರಾದ ಶಿವಣ್ಣ, ಎಸ್‌ಡಿಎಂಸಿ ಸದಸ್ಯ ಚಂದ್ರಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net