ಪಾಶ್ಯಾತ್ಯ ಶೈಲಿಗೆ ಮಾರು ಹೋದ ಯುವ ಜನತೆ

mm 4-5
Published on

ವಿಜಯಪುರ:ಹಿಂದು ಸಮಾಜದ ಯುವಜನತೆ ಪಾಶ್ಚಾತ್ಯ ಶೈಲಿಗೆ ಮಾರು ಹೋಗುವ ಮೂಲಕ ನಮ್ಮ ಸಂಸತಿ ಮತ್ತು ಸಂಪ್ರದಾಯಗಳನ್ನು ಮರೆಯುತ್ತಿರುವುದು ವಿಷಾದನೀಯ ಎಂದು ಪಂಡಿತ ಮಧ್ವಾಚಾರ್ಯ ಮೊಕಾಶಿ ಹೇಳಿದರು.

ಇಲ್ಲಿನ ಮೋಹನಗರದ ಕಾಮೀತಾರ್ಥಪದ ವೆಂಕಟೇಶ್ವರ ದೇವಾಲಯದಿಂದ ಹನುಮಗಿರಿಯ ಮುಖ್ಯಪ್ರಾಣ ಸನ್ನಿಧಾನದವರೆಗೆ ದೇವರ ನಾಮಸ್ಮರಣೆ ಜತೆಗೆ ಸಂಕೀರ್ತನೆಗಳೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಹಿಂದು ಸಮಾಜದ ಯುವಕರು ಪ್ರಸ್ತುತ ದಿನಗಳಲ್ಲಿ ಆಧ್ಯಾತ್ಮಿಕ ಹಾಗೂ ಸಾಂಸತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯ ಪ್ರಮಾಣ ಕುಸಿಯುತ್ತಿದೆ. ಅವರಿಗೆ ಆಧ್ಯಾತ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ಸಾಹ ತುಂಬುವ ನಿಟ್ಟಿನಲ್ಲಿ ಇನ್ನು ಮುಂದೆ ನಮ್ಮ ಸಂಸ್ಥೆ ವತಿಯಿಂದ ಪ್ರತಿ ತಿಂಗಳು ಹನುಮಗಿರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಸಾರ್ವಜನಿಕರು ತಪ್ಪದೇ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.ಪಂ. ಸಂಜೀವಾಚಾರ್ಯ ಮದಭಾವಿ ಮಾತನಾಡಿ, ಯುವಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ತಿಂಗಳಿಗೊಮ್ಮೆ ವೆಂಕಟಗಿರಿಯಿಂದ

ಹನುಮಗಿರಿಯವರೆಗೆ ಪಾದಯಾತ್ರೆ, ವನಭೋಜನ, ಆಧ್ಯಾತ್ಮಿಕ ಶಿಬಿರಗಳನ್ನು ಆಯೋಜಿಸುವ ಆಲೋಚನೆ ನಮ್ಮ ಸಂಸ್ಥೆ ಹೊಂದಿದೆ ಎಂದರು.

ಸಂಸ್ಥೆಯ ನೂತನ ಸಂಚಾಲಕ ಸಂಜೀವ ದೇಸಾಯಿ, ಸದಸ್ಯರಾದ ಗೋವಿಂದರಾಜ್​ ದೇಶಪಾಂಡೆ, ವಿವೇಕ ತಾವರಗೇರಿ, ಸಂಪತರಾವ್​ ಕುಲಕರ್ಣಿ, ಕೆ.ಬಿ. ಕುಲಕರ್ಣಿ, ಗುರು ಜೋಶಿ, ಆನಂದ ಕುಲಕರ್ಣಿ, ಮದ್ದು ದೇಸಾಯಿ, ಮಧುಸೂಧನ ಹವಾಲ್ದಾರ್​, ಸಂಜೀವ ಜಹಾಗೀರದಾರ, ಗುರುರಾಜ್​ ಪಾಗೆ, ಸವಿತಾ ಗಲಗಲಿ, ವಿನಯಾ ತಾವರಗೇರಿ, ರಾಧಾ ಕುಲಕರ್ಣಿ, ಜಯಶ್ರೀ ಕನ್ನೂರ ಮತ್ತಿತರರಿದ್ದರು.

ವಿಜಯಪುರದ ಮೋಹನಗರದ ಕಾಮೀತಾರ್ಥಪದ ವೆಂಕಟೇಶ್ವರ ದೇವಾಲಯದಿಂದ ಹನುಮಗಿರಿಯ ಮುಖ್ಯಪ್ರಾಣನ ಸನ್ನಿಧಾನದವರೆಗೆ ದೇವರ ನಾಮಸ್ಮರಣೆ ಮೂಲಕ ಪಾದಯಾತ್ರೆ ನಡೆಯಿತು. ಪಂ. ಮಧ್ವಾಚಾರ್ಯ ಮೊಕಾಶಿ, ಸಂಜೀವ ದೇಸಾಯಿ, ಸಂಜೀವಾಚಾರ್ಯ ಮದಭಾವಿ ಮತಯ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net