ಯುವಜನರಿಗೆ ನೆನಪಾಗುವುದು ಫೇಸ್‌ಬುಕ್ ಹಾಗೂ ಪಾಸ್‌ಬುಕ್ ಮಾತ್ರ..!

face
Published on

ಮೈಸೂರು: ಯುವ ಸಮುದಾಯ ಓದುವ ಸಂಸ್ಕೃತಿಯಿಂದ ವಿಮುಖವಾಗುತ್ತಿದ್ದು, ಯುವಜನರಿಗೆ ನೆನಪಾಗುವುದು ಫೇಸ್‌ಬುಕ್ ಹಾಗೂ ಪಾಸ್‌ಬುಕ್ ಮಾತ್ರ ಎಂದು ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ನಗರದ ಎಂ.ಜಿ. ರಸ್ತೆಯ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ಸಿ.ಎನ್.ಮೃತ್ಯುಂಜಂುಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಪ್ರದಾನ’ ಸವಾರಂಭವನ್ನು ಉದ್ಘಾಟಿಸಿ ಅವರು ವಾತನಾಡಿ, ಪುಸ್ತಕ ಓದುವ ಕಡೆಗೆ ಯುವಜನರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಓದುವ ಸಂಸ್ಕೃತಿ ವಿನಾಶದ ಅಂಚಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಧಕರು ಎಂದಿಗೂ ವಾತನಾಡುವುದಿಲ್ಲ. ಅವರ ಸಾಧನೆ ವಾತನಾಡುತ್ತದೆ. ನಮ್ಮಲ್ಲಿ ಅನೇಕ ಸಾಧಕರು ಎಲೆವಾರೆ ಕಾಯಿಂುಂತೆ ಹೋಗಿ ಬಿಡುತ್ತಾರೆ. ಅವರು ಜನವಾನಸದಲ್ಲಿ ಉಳಿಂುಬೇಕು. ಸಾಧಕರ ಸಾಧನೆ ದಾಖಲೀಕರಣವಾಗಬೇಕು. ಮೃತ್ಯುಂಜಂುಪ್ಪ ಆದರ್ಶ ಬದುಕು ಬದುಕಿದವರು. ವಾನವೀಂು ಅಂತಃಕರಣ ಹೊಂದಿದ್ದರು. ಅವರ ಜೀವನ ಶೈಲಿ, ಉಡುಗೆ ತೊಡುಗೆ, ವಾತಿನ ಕ್ರಮ ಎಲ್ಲವೂ ಶಿಸ್ತಿನಿಂದ ಕೂಡಿತ್ತು. ಸಾಹಿತ್ಯ, ಸಾಹಿತಿ ಕಂಡರೆ ಅವರಿಗೆ ಅಪಾರವಾದ ಗೌರವ ಇತ್ತು. ಅವರ ಸಾಧನೆ ಸದಾ ನೆನೆಂುುವಂತೆ ಆಗಲಿ ಎಂದರು.

ಸಿ.ಎನ್.ಮೃತ್ಯುಂಜಂುಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಸ್ವೀಕರಿಸಿದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ‘ಅಗ್ನಿರಕ್ಷಾ’ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಡಾ.ಪ್ರೇವಾ ಧನರಾಜ್ ವಾತನಾಡಿ, ಗಾಯಕಿ ಅಗಬೇಕು ಎಂಬುದು ನನ್ನ ಆಸೆಯಾಗಿತ್ತು. ಹಾಗಾಗಿ ಸಂಗೀತ ತರಗತಿಗೂ ಹೋಗಿದ್ದೆ. ಆದರೆ, ಸಣ್ಣ ವಯಸ್ಸಿನಲ್ಲಿ ಸೀಮೆ ಎಣ್ಣೆ ಸ್ಟೌ ಸ್ಫೋಟದಿಂದ ಗಾಯಗೊಂಡೆ. ನಂತರ ತಾಯಿಯ ಪ್ರೋತ್ಸಾಹದಿಂದ ವೈದ್ಯೆಯಾದೆ ಎಂದರು.

ನಾವು ನಮ್ಮನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಇದರಿಂದ ಉತ್ತಮ ಬದುಕು ಅಸಾಧ್ಯ. ನಮ್ಮಲಿನ ಪ್ರತಿಭೆ ಹೊರ ತರುವ ಪ್ರಯತ್ನ ಮಾಡಬೇಕು. ಆ ರೀತಿಯ ಪ್ರಯತ್ನ ಮಾತ್ರ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಲೇಖಕ ಪ್ರೊ.ಸಿ.ನಾಗಣ್ಣ, ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಅಧ್ಯಕ್ಷ ಮ.ಗು.ಸದಾನಂದಂ್ಯು, ಜಿಲ್ಲಾ ಘಟಕ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net