

ಅಥಣಿ ಗ್ರಾಮೀಣ: ಆಧುನಿಕ ಯುಗದಲ್ಲಿ ಭಾರತೀಯ ಸಂಸತಿ ಮುಂದುವರಿಸಿಕೊಂಡು ಹೋಗುವ ಜತೆಗೆ ಮಕ್ಕಳಲ್ಲಿ ಅಧ್ಯಾತ್ಮದ ಭಾವ ಮೂಡಿಸಿ ಮಾನವೀಯತೆ ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನದಿ ಇಂಗಳಗಾಂವದ ಸಿದಟಛಿಲಿಂಗ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಭಾನುವಾರ ಶ್ರಾವಣ ಮಾಸ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಸಮಾರೋಪದಲ್ಲಿ ಅವರು ಮಾತನಾಡಿ, ಯುವ ಜನಾಂಗವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಕಾರ್ಯವಾಗಬೇಕಿದೆ. ಅವರ ಬದುಕಿಗೆ ಅವರೇ ಶಿಲ್ಪಿಯಾಗಿ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಪ್ರವಚನಕಾರ ವಿಜಯಪುರದ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಯುವಜನರು ದುಶ್ಚಟಗಳಿಂದ ದೂರವಾಗಿ ಶಿಣದತ್ತ ಗಮನಹರಿಸಬೇಕು. ಪ್ರವಚನ ಆಲಿಸಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.
ಅಥಣಿ ಶಿವಬಸವ ಸ್ವಾಮೀಜಿ, ಮುರುಳಸಿದಟಛಿ ದೇವರು, ಯಕ್ಕಂಚಿಯ ಗುರುಪಾದ ಸ್ವಾಮೀಜಿ, ಕೂಡಲಸಂಗಮದ ಬಸವಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಜಯಪುರದ ಲಿಂ.ಸಿದೆಟಛೀಶ್ವರ ಶ್ರೀಗಳ ಭಾವಚಿತ್ರದೊಂದಿಗೆ ಗ್ರಾಮದಲ್ಲಿ ಕುಂಭ ಮೆರವಣಿಗೆ ನೆರವೇರಿತು.
ಮುಖಂಡರಾದ ಸಾಗರ ಕಟಗೇರಿ, ನರಸಪ್ಪ ಮಹಿಷವಾಡಗಿ, ಶಿವಪುತ್ರ ಕುರಬರ, ಶಿವಾನಂದ ಖೋತ್, ಸೂರಜ ಕುಲಕರ್ಣಿ, ಮಂಜುನಾಥ ಮಂಟೂರ, ರಾಮಪ್ಪ ಗಣಿ, ಮಲ್ಲಯ್ಯ ಮಠಪತಿ, ಮುರಗೆಪ್ಪ ದರೂರ, ಪ್ರಕಾಶ ಪೂಜಾರಿ, ಗುರುಶಾಂತ ಕರಡಿಮಠ, ರಾಮು ಗಾಳಿ ಇತರರಿದ್ದರು.