ವಿವಿಧ ಬಗೆ ಅಡುಗೆ ಸವಿದ ಯುವಕರು

Young people enjoying various types of cooking
ಇಳಕಲ್ಲ ನಗರದ ಕೂಡಲಸಂಗಮ ಕಾಲನಿಯಲ್ಲಿ ಮಕ್ಕಳು ರಂಗಿನಾಟದಲ್ಲಿ ತೊಡಗಿರುವುದು.
Published on

ಇಳಕಲ್ಲ(ಗ್ರಾ): ಹೋಳಿ ಹಬ್ಬದ ಸಡಗರ ನಗರದೆಲ್ಲೆಡೆ ಮನೆಮಾಡಿದೆ. ಶುಕ್ರವಾರ ಕಾಮನ ಮೂರ್ತಿ ಪ್ರತಿಷ್ಠಾಪಿಸಿ ರಾತ್ರಿ 12 ಗಂಟೆಗೆ ಕಾಮದಹನ ಮಾಡಿ ಸಂಭ್ರಮಿಸಲಾಯಿತು.

ಶನಿವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾದ ರಂಗಿನಾಟದಲ್ಲಿ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಮಧ್ಯಾಹ್ನ ನಗರದ ಹೊರವಲಯದಲ್ಲಿ ಯುವಕರು ವಿವಿಧ ಬಗೆಯ ಅಡುಗೆ ತಯಾರಿಸಿ ಸವಿದರು. ಹೋಳಿ ರಂಗಿನಾಟ ಎರಡನೇ ದಿನವು ಮುಂದುವರಿಯಿತು.

ನಗರದ ಕೆಲವೊಂದಿಷ್ಟು ಜನರು ಹೋಳಿ ಆಡದೆ ತಿರುಪತಿ, ದಾಂಡೇಲಿ, ಗೋವಾ, ಹಂಪಿ, ಸಾಣಾಪೂರ ಸೇರಿ ಪ್ರಮುಖ ಸ್ಥಳಗಳಿಗೆ ಪ್ರವಾಸ ಹೋಗಿದ್ದರು. ನಗರದ ಎಲ್ಲ ಅಂಗಡಿ ಮುಂಗಟ್ಟು ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ನಗರ ನಿಶಬ್ದವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net