ಯುವಜನತೆ ಜಾಗೃತರಾಗಲಿ

5 KMP 02
ಕಂಪ್ಲಿ ಮಾರುತಿನಗರ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಪರಿಸರ ಪ್ರೇಮಿಗಳು ಸಸಿನೆಟ್ಟು ನೀರೆರೆದರು. ಪ್ರಮುಖರಾದ ವಿ.ಮಹ್ಮದ್ ಗೌಸ್, ಎಚ್.ಸಂಜೀವ, ಮಹ್ಮದ್ ವಾಸೀಮ್, ಕೆ.ಮಲ್ಲಿಕಾರ್ಜುನ ಇತರರಿದ್ದರು.
Published on

ಕಂಪ್ಲಿ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮಾರುತಿನಗರದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗುರುವಾರ ಮಾರುತಿನಗರದ ಪರಿಸರ ಪ್ರೇಮಿಗಳು ಸಸಿ ನೆಟ್ಟು ನೀರೆರೆದರು.

ಮಾರುತಿನಗರದ ಪ್ರಮುಖ ವಿ.ಮಹ್ಮದ್ ಗೌಸ್ ಮಾತನಾಡಿ, ಮರಗಿಡಗಳನ್ನು ಪೋಷಣೆ ಮಾಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕಿದೆ. ಕೇವಲ ಸಸಿಗಳನ್ನು ನೆಟ್ಟು ತಾತ್ಸಾರತೋರದೆ ನೆಟ್ಟ ಸಸಿಗಳನ್ನು ಪೋಷಿಸಿ ಮರಗಳನ್ನಾಗಿ ಬೆಳೆಸುವಲ್ಲಿ ಯುವಜನತೆ ಜಾಗೃತಿ ಹೊಂದಬೇಕಿದೆ.ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಜಾಗೃತಿಗೊಳಿಸುವ ಕೆಲಸ ಆಗಬೇಕಿದೆ ಎಂದರು.

ಮಾರುತಿನಗರದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಉಷಾ, ಸಹಾಯಕಿ ಶಾಂತಮ್ಮ, ಯುವಕರಾದ ಎಚ್.ಸಂಜೀವ, ಎಂ.ಖಾದರ್‌ಬಾಷಾ, ಸಂತೋಷ್, ಯೂನೂಸ್, ಖಾಲಿಚೀಲ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net