

ಕುಕನೂರು: ದಲಿತ ಕಾಲನಿಯ ಸಮಸ್ಯೆಗಳನ್ನು ಪೊಲೀಸ್‌ರಗೆ ತಿಳಿಸಿದರೆ ತಕ್ಷಣ ಪರಿಹಾರ ನೀಡಲು ಸಾಧ್ಯ ಎಂದು ಪಿಎಸ್‌ಐ ಟಿ.ಗುರುರಾಜ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ದಲಿತರಿಗೆ ಯಾರಾದರು ನೋವು ಉಂಟು ಮಾಡಿದರೆ ಹಾಗೂ ಮದ್ಯ ಮಾರಾಟದ ಜಾಲತಾಣದಲ್ಲಿ ಭಾಗಿಯಾಗಿದ್ದರೆ ಅಂಥವರ ಬಗ್ಗೆ ನಮಗೆ ತಿಳಿಸಿ. ಬಡ ಯುವಕರಿಗೆ ಯಾವುದೇ ಚಟ ಇದ್ದರೂ ಅವರನ್ನ ತಿಳಿ ಹೇಳುವ ಮೂಲಕ ಬದಲಿಯಿಸುವ ಪ್ರಯತ್ನ ನಡೇಯಬೇಕು ಎಂದರು.
ಪ್ರಮುಖರಾದ ನಿಂಗಪ್ಪ ಗೊರಲೆಕೊಪ್ಪ, ಲಕ್ಷ್ಮಣ ಕಾಳಿ, ಶರಣಪ್ಪ ಚಲವಾದಿ, ರಾಘು ಕಾತರಕಿ, ಶ್ರೀಧರ್ ಭಂಡಾರಿ, ರಾಘು ಮಾಳೇಕೊಪ್ಪ, ನಾಗರಾಜ ಚಲವಾದಿ, ಪಕೀರಪ್ಪ ಕಾಳಿ, ವೀರೇಶ ಬಂಕದಮನೆ, ಸಂತೋಷ್ ಬಂಕದಮನೆ, ಯಮನೂರಪ್ಪ ವಡ್ಡರ್, ಕುಮಾರ ಕಾಳಿ ಇತರರಿದ್ದರು.