ಸ್ಟೈಲಿಶ್ ಕಲರ್‌ಗೆ ಮಾರುಹೋದ ಯುವಕ, ಯುವತಿಯರು

3NGD1
ನಂಜನಗೂಡು ಗುರುಭವನದಲ್ಲಿ ಆಯೋಜಿಸಿದ್ದ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನದಲ್ಲಿ ಎರಡನೇ ದಿನವಾದ ಸೋಮವಾರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
Published on

ನಂಜನಗೂಡು: ನಗರದ ಗುರುಭವನದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನಕ್ಕೆ ಎರಡನೇ ದಿನವಾದ ಸೋಮವಾರವೂ ಉತ್ತಮ ಪ್ರಕ್ರಿಯೆ ವ್ಯಕ್ತವಾಯಿತು.


ಬೆಳಗ್ಗೆಯಿಂದಲೇ ಪುರುಷರು, ಮಹಿಳೆಯರು, ಯುವಕರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೇರ್ ಕಲರಿಂಗ್ ಮಾಡಿಸಿಕೊಂಡರು. ಗಾರ್ನಿಯರ್ ಕಂಪನಿಯ ಮಹಿಳಾ ಉದ್ಯೋಗಿಗಳು ಉಚಿತವಾಗಿ ಹೇರ್ ಕಲರಿಂಗ್ ಮಾಡಿಕೊಡುವ ಮೂಲಕ ನೆರವಾದರು. ಹೇರ್ ಕಲರಿಂಗ್ ಮಾಡಿಸಿಕೊಂಡವರು ಸೆಲ್ಫಿ ಪರದೆ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.


ವಿಶೇಷವಾಗಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಗೃಹಿಣಿಯರು ನವನವೀನ ಮಾದರಿಯ ಹೇರ್ ಕಲರಿಂಗ್ ಮಾಡಿಸಿಕೊಂಡರು. ಯುವಕರು ಕೂಡ ಸ್ಟೈಲಿಶ್ ಕಲರ್‌ಗೆ ಮಾರುಹೋದರು. ಎಲ್ಲರೂ ತಮಗಿಷ್ಟವಾದ ಕಲರಿಂಗ್ ಮಾಡಿಸಿಕೊಳ್ಳಲು ಉಚಿತವಾಗಿ ನೆರವಾಗುತ್ತಿರುವ ವಿಜಯವಾಣಿ ಪತ್ರಿಕೆ ಕಾರ್ಯಕ್ಕೆ ಶ್ಲಾಘನೆಯನ್ನೂ ವ್ಯಕ್ತಪಡಿಸಿದರು.


ಇಂದಿನ ಕಾರ್ಯಕ್ರಮ
ಗುರುಭವನದಲ್ಲೇ ಉಚಿತ ಹೇರ್ ಕಲರಿಂಗ್ ಕಾರ್ಯ ಮುಂದುವರಿಯಲಿದ್ದು, ನಂಜನಗೂಡಿನ ಸಾರ್ವಜನಿಕರು ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net