ಗಾಯಾಳುಗಳ ರಕ್ಷಣೆಗೆ ಹೋದ ಯುವಕ ಅಪಘಾತದಲ್ಲಿ ಸಾವು

accident raichur
Published on

ಚನ್ನಪಟ್ಟಣ:

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಲು ಹೋದ ಯುವಕನೊರ್ವ ತಾನೇ ಅಪಘಾತದಲ್ಲಿ ಮೃತಪಟ್ಟಿರುವ ಧಾರುಣ ಘಟನೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇಯ ಬೈರಾಪಟ್ಟಣ ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಸಂಕಲಗೆರೆ ಗ್ರಾಮದ ನರಸಿಂಹ ಎಂಬುವವರ ಪುತ್ರ ದರ್ಶನ್ (೨೨) ಮೃತ ದುರ್ದೈವಿ. ಇಂಜಿನಿಯರ್ ವಿದ್ಯಾರ್ಥಿಯಾದ ಈತ ಬೈರಾಪಟ್ಟಣ ಬಳಿ ಇರುವ ಗ್ಯಾಸ್ ಗೋದಾಮಿಗೆ ಹೋಗಿ ವಾಪಸು ಮನೆಗೆ ತೆರಳುವಾಗ, ಎಕ್ಸ್‌ಪ್ರೆಸ್‌ ಹೈವೇಯ ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಎಕ್ಸಿಟ್ ಆಗುವ ಸ್ಥಳದಲ್ಲಿ ಆಟೋವೊಂದು ಅಪಘಾತಗೊಳ್ಳುತ್ತದೆ. ಈ ವೇಳೆ ತನ್ನ ದ್ವಿಚಕ್ರ ವಾಹನವನ್ನು ಆಯೋದ್ಯೆ ಹೋಟೆಲ್ ಬಳಿ ನಿಲ್ಲಿಸಿ, ಸಹಾಯಕ್ಕೆಂದು ಅಫಘಾತವಾದ ಸ್ಥಳಕ್ಕೆ ತೆರಳುತ್ತಾನೆ. ತದನಂತರ, ವಾಪಸು ತಾನು ರಸ್ತೆ ದಾಟುವ ವೇಳೆ ಐರಾವತ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net