ನಗರಸಭಾ ಉಪಾಧ್ಯಕ್ಷಗಾದಿಗೇರಿದ ಮನೆ ಮನೆಗೆ ಗ್ಯಾಸ್ ಪೂರೈಸುತ್ತಿದ್ದ ಯುವಕ!

IMG_20240913_204251.jpg
Published on

ಚಿಕ್ಕಬಳ್ಳಾಪುರ: ಮನೆ ಮನೆಗೆ ಗ್ಯಾಸ್ ಸಿಲಿಂಡರ್ ಪೂರೈಸುತ್ತಿದ್ದ ಯುವಕ  ನಗರಸಭೆಯ ಉಪಾಧ್ಯಕ್ಷಗಾದಿಗೇರುವಲ್ಲಿ ಯಶಸ್ವಿಯಾಗಿದ್ದಾರೆ‌.
ಇಲ್ಲಿನ ಖಾಸಗಿ ಗ್ಯಾಸ್ ಏಜೆನ್ಸಿಯಲ್ಲಿ ಮನೆ ಮನೆಗೆ ಗ್ಯಾಸ್ ಸಿಲಿಂಡರ್ ಪೂರೈಸುತ್ತಿದ್ದ ನಾಗರಾಜ್ ಸಾಮಾಜಿಕ ಸೇವಾ ಚಟುವಟಿಕೆ, ಜನಪರ ಸಮಸ್ಯೆಗಳ ಪರಿಹಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಕಳೆದ ನಗರಸಭಾ ಸದಸ್ಯರ ಚುನಾವಣೆಯಲ್ಲಿ ನಗರದ 5ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದು ಇದೀಗ ಉಪಾಧ್ಯಕ್ಷಗಾದಿಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ.

* ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ, ಬಳಿಕ ಉಪಾಧ್ಯಕ್ಷರಾಗಲು ಸಂಸದ ಡಾ.ಕೆ. ಸುಧಾಕರ್ ಪ್ರಮುಖ ಕಾರಣ. ನನ್ನ ಆಯ್ಕೆಯ ಮೂಲಕ ಸಾಮಾನ್ಯನಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಸಿಗಬೇಕು ಎಂಬ ಅಂಬೇಡ್ಕರ್ ಆಶಯ ಸಾಕಾರಕ್ಕೆ ಒಂದು ನಿದರ್ಶನ.
ರಾಜಕೀಯ, ಪಕ್ಷ ಎಂಬುದು ಕೇವಲ ಚುನಾವಣೆಗೆ ಮಾತ್ರ ಸೀಮಿತ. ಇನ್ನೇನಿದ್ದರೂ ಜನಪ್ರತಿನಿಧಿಗಳಿಗೆ ಅಭಿವೃದ್ಧಿಯೇ ಮುಖ್ಯವಾಗಬೇಕು. 

ನಾಗರಾಜ್, ನಗರಸಭೆ ಉಪಾಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net