ಚಾಕುವಿಂದ ಇರಿದು ಯುವಕನ ಕೊಲೆ

SADIK
SADIK
Published on

ರಾಯಚೂರು ಹಳೆ ವೈಷಮ್ಯಕ್ಕೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ಬೆಳ್ಳಂಬೆಳಗೆ ನಗರದ ಝಾಕೀರ್ ಹುಸೇನ್ ವೃತ್ತದಲ್ಲಿ ನಡೆದಿದೆ.

ಜಹೀರಾಬಾದ್ ಬಡಾವಣೆಯ ನಿವಾಸಿ ಸಾದಿಕ್( 27) ಮೃತ ಯುವಕ.

ಬೆಳಗ್ಗೆ ಮೃತ ಯುವಕ ಹುಸೇನ್ ಹಾಗೂ ಅತನ ಸ್ನೇಹಿತರು ಇಡ್ಲಿ ತಿನ್ನಲು ಆಗಮಿಸಿದ ವೇಳೆಯಲ್ಲಿ ಆರೋಪಿ ಕರೀಂ ಎನ್ನುವ ಯುವಕ ದಾಳಿ ಮಾಡಿ ಚಾಕುವಿಂದ ಮನಸೊಇಚ್ಛೆ ಚುಚ್ಚಲಾಗಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾದಿಕ್‌ನನ್ನು ಆಸ್ಪತ್ರೆಗೆ ಸಾಗಿಸುವಾಗ, ಮಾರ್ಗ ಮಧ್ಯೆ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿಯುದ್ದಂತೆ ಸದಾರ್ ಬಜಾರ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಹಳೇ ವೈಷಮ್ಯವೇ ಕಾರಣ ಇರಬಹುದೆಂದು ಹೇಳಾಲಾಗುತ್ತಿದೆ. ಈ ಕುರಿತು ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net