ಯುವಕನಿಗೆ ಚಾಕು ಇರಿತ

crime
Published on

ಹುಬ್ಬಳ್ಳಿ: ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಯುವತಿಯ ಚಿಕ್ಕಪ್ಪ ಕುಪಿತಗೊಂಡು ಚಾಕು ಇರಿದ ಘಟನೆ ಸದರಸೋಫಾ ಓಣಿಯಲ್ಲಿ ನಡೆದಿದೆ.

ಗೌಸ್ ಮೊಯಿನುದ್ದೀನ್ ಚಾಕು ಇರಿತಕ್ಕೊಳಗಾದ ಯುವಕ. ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಗೌಸ್ ಮೊಯಿನುದ್ದೀನ್, ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಯುವತಿ ಚಿಕ್ಕಪ್ಪ ವಸೀಂ ಕುಪಿತಗೊಂಡಿದ್ದ. ಯುವತಿ ಕಡೆಯಿಂದ ಯುವಕನನ್ನು ಕರೆಯಿಸಿ ದಾಳಿ ಮಾಡಿದ್ದ ಎನ್ನಲಾಗಿದೆ. ಗಾಯಾಳು ಗೌಸ್ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಗಾಯಾಳು ಗೌಸ್ ಚೇತರಿಸಿಕೊಳ್ಳುತ್ತಿದ್ದಾನೆ. ವಸೀಂ ಮತ್ತು ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಯಾವ ಕಾರಣಕ್ಕೆ ಚಾಕು ಇರಿತವಾಗಿದೆ ಸೇರಿ ಇತರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net