ಮೈಸೂರು: ಇನ್ಟ್ರಾಗ್ರಾಂನಲ್ಲಿ ಬಂದ ಜಾಹೀರಾತು ನಂಬಿ ಆನ್‌ಲೈನ್‌ನಲ್ಲಿ ಹಣ ತೊಡಗಿಸಿದ್ದ ಗೋಕುಲಂನ ನಿವಾಸಿ 29.4 ಲಕ್ಷ ರೂ. ಕಳೆದುಕೊಂಡಿದ್ದಾರೆ.ತಮ್ಮ ಮೊಬೈಲ್‌ಗೆ ಬಂದ ಜಾಹೀರಾತು ಗಮನಿಸಿ ನಕಲಿ ಟ್ರೇಡಿಂಗ್‌ನಲ್ಲಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದು, ವಾಪಸ್ ಬಾರದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಯುವಕ ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.