ರೈಲು ಡಿಕ್ಕಿ ಅಪರಿಚಿತ ಯುವಕ ಸಾವು: ಬಲಗೈ ಮೇಲೆ ತ್ರಿಶೂಲ, ಕುದುರೆಮುಖದ ಹಚ್ಚೆ

Crime Logo
Published on

ಮಂಡ್ಯ: ಮಂಡ್ಯ-ಯಲಿಯೂರು ಮಾರ್ಗಮಧ್ಯೆ ಗುರುವಾರ ರೈಲು ಡಿಕ್ಕಿ ಹೊಡೆದು ಅಪರಿಚಿತ ಯುವಕ ಮೃತಪಟ್ಟಿದ್ದಾನೆ.

ಸುಮಾರು 35 ರಿಂದ 40 ವರ್ಷದವನಾಗಿದ್ದು, 5.6 ಅಡಿ ಎತ್ತರವಿದ್ದಾನೆ. ಬಲಗೈ ಮೇಲೆ ತ್ರಿಶೂಲ ಮತ್ತು ಕುದುರೆ ಮುಖದ ಹಚ್ಚೆ ಇದೆ. ಹಿತ್ತಾಳೆ ಸರ ಕುತ್ತಿಗೆಯಲ್ಲಿದೆ. ಮೃತನ ಮೈಮೇಲೆ ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್, ಹಳದಿ ಬಣ್ಣದ ಅರ್ಧತೋಳಿನ ಶರ್ಟ್ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net