

ಮಂಡ್ಯ: ಪಾಂಡವಪುರ ರೈಲ್ವೆ ನಿಲ್ದಾಣದ ವೇದಿಕೆ ನಂ.1ರಲ್ಲಿ ಸೋಮವಾರ ರೈಲಿಗೆ ಸಿಲುಕಿ ಅಪರಿಚಿತ ಯುವಕ ಮೃತಪಟ್ಟಿದ್ದಾನೆ.
ಸುಮಾರು 30 ವರ್ಷದವನಾಗಿದ್ದು, 5.7 ಅಡಿ ಎತ್ತರ ಹಾಗೂ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾನೆ. ಮೃತನ ಮೈಮೇಲೆ ನೀಲಿ ಮತ್ತು ಬೂದು ಬಣ್ಣದ ಚೆಕ್ಸ್‌ಗಳುಳ್ಳ ತುಂಬು ತೋಳಿನ ಅಂಗಿ, ಹಸಿರು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾನೆ. ಮೃತ ಶರೀರವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.