ರೈಲಿಗೆ ಸಿಲುಕಿ ಯುವಕ ಸಾವು: ಕುತ್ತಿಗೆ ಮೇಲಿದೆ ಹದ್ದಿನ ಚಿತ್ರದ ಹಚ್ಚೆ

Crime Logo
Published on

ಮಂಡ್ಯ: ಮಂಡ್ಯ-ಯಲಿಯೂರು ಮಾರ್ಗಮಧ್ಯೆ ಭಾನುವಾರ ರೈಲಿಗೆ ಸಿಲುಕಿ ಅಪರಿಚಿತ ಯುವಕ ಮೃತಪಟ್ಟಿದ್ದಾನೆ.

ಸುಮಾರು 18 ರಿಂದ 20 ವರ್ಷದವನಾಗಿದ್ದು, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಹಲ್ಲು ಉಬ್ಬಾಗಿದ್ದು, ಬಲಭಾಗದ ಕಿವಿಯ ಸಮೀಪ ಕುತ್ತಿಗೆ ಮೇಲೆ ಹದ್ದಿನ ಚಿತ್ರವಿರುವ ಹಚ್ಚೆ ಇದೆ. ಈತನ ಮೈಮೇಲೆ ನೀಲಿ ಬಣ್ಣದ ಜರ್ಕಿನ್ ಇದೆ. ಮೃತನ ಶರೀರವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net