ಯುವಕನನ್ನು ಅಪಹರಿಸಿ 7 ಲಕ್ಷ ಬೇಡಿಕೆ ಇಟ್ಟಿದ್ದ ಮಹಿಳೆ ಸೇರಿ ಇಬ್ಬರ ಬಂಧನ

Gadiganuru Police Kidnapars
Published on

ಹೊಸಪೇಟೆ: ಯುವಕನನ್ನು ಅಪಹರಣ ಮಾಡಿ 7 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮಹಿಳೆ ಸೇರಿ ಇಬ್ಬರನ್ನು ಗಾದಿಗನೂರು ಠಾಣೆ ಪೊಲೀಸರು ಶನಿವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಧರ್ಮಪುರಿಯ ಅನಿತಾ ಧನಶೇಖರನ್, ಇಮ್ರಾನ್ ಬಾಷಾ (ಮುಬಾರಕ್ ಬಾಷಾ) ಬಂಧಿತರು. ಮಲ್ಲಿಕಾರ್ಜುನ (23) ಅಪಹರಣಕ್ಕೆ ಒಳಗಾಗಿದ್ದ ಯುವಕ. ಮಲ್ಲಿಕಾರ್ಜುನ ಸಹೋದರ ನೀಡಿದ ದೂರಿನ ಮೇರೆಗೆ ತೋರಣಗಲ್ಲು ಠಾಣೆ ಪಿಎಸ್‌ಐ ಕಾಳಿಂಗ ನೇತೃತ್ವದಲ್ಲಿ ಪಿಸಿ ಶಿವಕುಮಾರ್, ಗಾದಿಗನೂರು ಠಾಣೆಯ ಪಿಸಿ ಹಾಲೇಶ್ ತಂಡ ರಚಿಸಿ, ಆರೋಪಿತರ ಪತ್ತೆಗೆ ಬಲೆ ಬೀಸಲಾಗಿತ್ತು. ಅಪಹರಣಕಾರರ ಮೊಬೈಲ್ ಕರೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ತಮಿಳುನಾಡಿನ ಧರ್ಮಪುರಿಯಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಮಲ್ಲಿಕಾರ್ಜುನನ್ನು ರಕ್ಷಿಸಿ, ಕರೆತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net