ಯುವಕನ ಕೊಚ್ಚಿ ಕೊಲೆ

11HUK1 CRIME Meerasab Jamakhandi Photo
Published on

ಹುಕ್ಕೇರಿ: ಮಾರಕಾಸಗಳಿಂದ ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಟನೆ ಪಟ್ಟಣದ ಬಿಎಸ್​ಎನ್​ಎಲ್​ ಆಫೀಸ್​ ಎದುರು ಸೋಮವಾರ ನಡೆದಿದೆ. ತಾಲೂಕಿನ ಅವರಗೋಳ ಗ್ರಾಮದ ಮೀರಾಸಾಬ್​ (ಮಲೀಕಜಾನ್​) ಹುಸೇನಸಾಬ್​ ಜಮಖಂಡಿ (28) ಮೃತ ಯುವಕ. ಅದೇ ಗ್ರಾಮದ ಸೋದರ ಸಂಬಂಧಿಗಳಾದ ಶ್ಯಾನೂರ್​ ಜಮಖಂಡಿ (24) ಮತ್ತು ಬಶೀರ್​ ಕಿಲ್ಲೇದಾರ (38) ಕೊಲೆ ಮಾಡಿದ ಆರೋಪಿಗಳು. ಕೊಲೆಗೆ ಆಸ್ತಿ ವಿವಾದವೇ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹುಕ್ಕೇರಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net