‘ವಿಷ್ಣು ಸಮುದ್ರ’ದಲ್ಲಿ ಯುವಕ ನಾಪತ್ತೆ

20blrp3
ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಶೋಧ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ
Published on

ಬೇಲೂರು: ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಶುಕ್ರವಾರ ಬೆಳಗ್ಗೆ ಸ್ನಾನಕ್ಕೆ ಹೋದ ಯುವಕ ನಾಪತ್ತೆಯಾಗಿದ್ದಾನೆ.

ಬೇಲೂರು ಪಟ್ಟಣದಲ್ಲಿ ಹಾಲಿ ವಾಸವಿರುವ ಸುಗ್ಗಲೂರು ಸೋಮನಹಳ್ಳಿ ಗ್ರಾಮದ ಸೋಮೇಗೌಡ ಪುತ್ರ ಪ್ರಜ್ವಲ್(25) ನಾಪತ್ತೆಯಾದ ಯುವಕ. ಇವರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಕೆಲ ವರ್ಷ ಶಿವಮೊಗ್ಗ, ದಾವಣಗೆರೆಯ ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ ಸ್ವಗ್ರಾಮಕ್ಕೆ ಆಗಮಿಸಿದ್ದ ಪ್ರಜ್ವಲ್ ತಂದೆ-ತಾಯಿಯರೊಂದಿಗೆ ತಮ್ಮ ತೋಟದ ಕಾಫಿ ಕೊಯ್ಲಿಗೆ ಹೋಗುತ್ತಿದ್ದರು.

ಶುಕ್ರವಾರ ತಂದೆಯೊಂದಿಗೆ ತೋಟಕ್ಕೆ ತೆರಳದೆ ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಗೆ ಬಂದು ಸ್ನಾನಕ್ಕಾಗಿ ಕಲ್ಯಾಣಿಗಿಳಿದಿದ್ದಾರೆ. ಆದರೆ ಮೆಟ್ಟಿಲು ಜಾರಿ ನೀರಿಗೆ ಬಿದ್ದಿದ್ದು, ನಾಪತ್ತೆಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ಪಟ್ಟಣ ಠಾಣೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸಹಕಾರದೊಂದಿಗೆ ಶುಕ್ರವಾರ ಸಂಜೆವರೆಗೂ ಕಲ್ಯಾಣಿಯಲ್ಲಿ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಲಿಲ್ಲ. ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಸ್ಥಳದಲ್ಲಿ ಪಜ್ವಲ್ ತಾಯಿ ಮತ್ತು ಸಂಬಂಧಿಕರ ರೋದನ ಮನಕಲಕಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net