

ಚಿಕ್ಕಬಳ್ಳಾಪುರ: ಜಮೀನಿನ ವಿಚಾರದ ಚರ್ಚೆಯ ನಡುವೆ ಪರಸ್ಪರ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ, ಯುವಕನೊಬ್ಬ ಸಂಬಂಧಿಯನ್ನು ಮಾರಕಾಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಗ್ರಾಮದ ಕೆಇಬಿ ಕಂಟ್ರಾಕ್ಟರ್ ಲಕ್ಷಿ$್ಮ ನರಸಪ್ಪ (54) ಕೊಲೆಯಾದವ. ದಾಯಾದಿ ಬಾಲಕುಂಟಹಳ್ಳಿ ನಂದೀಶ್ (34) ಆರೋಪಿ. ಹಾಡಹಗಲೇ ಕುಟುಂಬದ ಸದಸ್ಯರ ಸಮ್ಮುಖದಲ್ಲಿಯೇ ಬರ್ಬರ ಕೊಲೆ, ಮನೆಯಲ್ಲಿ ರಕ್ತಸಿಕ್ತ ವಾತಾವರಣ, ರಸ್ತೆಯಲ್ಲಿ ಜೋರು ಕಿರುಚಾಟ, ಮಾರಕಾಯುಧವನ್ನು ಹಿಡಿದುಕೊಂಡು ಹೋಗಿ ಆರೋಪಿ ಪೊಲೀಸರಿಗೆ ಶರಣಾಗಿರುವ ದೃಶ್ಯಗಳನ್ನು ನೋಡಿ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೆ ಈ ಇಬ್ಬರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಆಸ್ತಿಪಾಸ್ತಿ ವಿಚಾರವಾಗಿ ಮಾತ್ರ ಸುಮ್ಮನೆ ಚರ್ಚೆಯಾಗುತ್ತಿತ್ತು. ಇದು ಭಾನುವಾರ ವಿಕೋಪಕ್ಕೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
*ಅಸಲಿಗೆ ನಡೆದಿದ್ದೇನು?
ಭಾನುವಾರ ಆರೋಪಿ ನಂದೀಶ್ ಪೋಶೆಟ್ಟಹಳ್ಳಿಯ ಲಕ್ಷಿ$್ಮನರಸಪ್ಪ ಮನೆಗೆ ಬಂದು ಜಮೀನು ವಿಚಾರವಾಗಿ ಚರ್ಚಿಸಿದ್ದಾನೆ. ಇದೇ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ತಕ್ಷಣ ಮನೆಯಲ್ಲಿದ್ದ ಲಕ್ಷಿ$್ಮನರಸಪ್ಪನ ಪತ್ನಿ ಪ್ರಮೀಳಮ್ಮ ಹಾಗೂ ಮಗ ಮನುವನ್ನು ಹೊರಗೆ ಹಾಕಿ, ಬಾಗಿಲಿನ ಚಿಲಕ ಹಾಕಿಕೊಂಡಿದ್ದಾನೆ. ಬಳಿಕ ಒಳಗೆ ಮಚ್ಚು ತೆಗೆದುಕೊಂಡು ಮನಸ್ಸಿಗೆ ಬಂದಂತೆ ಒಂಟಿ ಹಿರಿಯನ ಮೇಲೆ ದಾಳಿ ನಡೆಸಿದ್ದು ತಲೆ, ಎದೆ ಹಾಗೂ ಬೆನ್ನಿಗೆ ಬಿದ್ದ ಗಂಭೀರ ಗಾಯಗಳಿಗೆ ಲಕ್ಷಿ$್ಮನರಸಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.