

ಉಡುಪಿ: ಸ್ನೇಹಿತರೊಂದಿಗೆ ಪಟ್ಟಿಬಾವು ಹೊಳೆಯ ಬಳಿ ಸ್ನಾನ ಮಾಡಲೆಂದು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ.
ಕಾರ್ಕಳ ಅಜಯ್ (21) ಮೃತರು. ಇವರು ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದು ಭಾನುವಾರ ಸ್ನೇಹಿತರಾದ ಮನೋಜ್, ಮನೋಹರ ಹಾಗೂ ಇತರರೊಂದಿಗೆ ಬೈರಂಪಳ್ಳಿ ಗ್ರಾಮದ ಕೆ ಸಿ ರೋಡ್ ಗೆ ವಾಲಿಬಾಲ್ ಆಡಲೆಂದು ಮನೆಯಿಂದ ಹೋಗಿದ್ದು , ವಾಲಿಬಾಲ್ ಆಟ ಆಡಿದ ನಂತರ ಸ್ನೇಹಿತರು ಪಟ್ಟಿಬಾವು ಹೊಳೆಯ ಬಳಿ ಸ್ನಾನ ಮಾಡಲೆಂದು ಹೋಗಿದ್ದಾರೆ. ಈಜುಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವುದಾಗಿ ಹೊಳೆಯ ನೀರಿಗಿಳಿದಿದ ಅಜಯ್ ಇನ್ನೊಂದು ದಡಕ್ಕೆ ಹೋಗಲು ಆಗದೇ ನದಿಯ ಮದ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಿಯರಾದ ಗಣೇಶ್ ಎಂಬುವರು ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.