

ಮೈಸೂರು: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಹೆಬ್ಬಾಳಿನ ಯೋಗೇಶ್(23) ಮೃತಪಟ್ಟಿದ್ದಾನೆ.
ಸೋಮವಾರ ಕೆಸರೆಯಿಂದ ಮನೆಗೆ ಹೋಗುವಾಗ ಉನ್ನತಿನಗರದ ಬಳಿ ಬೆಲವತ್ತ ರಿಂಗ್ ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಎನ್.ಆರ್. ಸಂಚಾರ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.