

ಗೋಣಿಕೊಪ್ಪ: ಅಡಕೆ ಕೊಯ್ಲು ಮಾಡುತ್ತಿದ್ದಾಗ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ಹರಿದು ಯುವಕ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ನಾಮೇರ ಪ್ರಸನ್ನ, ಸ್ವಪ್ನ ದಂಪತಿ ಪುತ್ರ ದಿಶನ್ ದೇವಯ್ಯ (೨೧) ಮೃತರು.
ಬೆಳಗ್ಗೆ ಕಾಫಿ ತೋಟದಲ್ಲಿ ಅಡಕೆ ಕೊಯ್ಲು ಮಾಡುವ ಸಂದರ್ಭ ಏಣಿ ಜಾರಿ ವಿದ್ಯುತ್ ತಂತಿಗೆ ತಾಗಿದಾಗ ಘಟನೆ ನಡೆದಿದೆ. ದಿಶನ್ ದೇವಯ್ಯ ಸ್ಥಳದಲ್ಲಿಯೇ ಸಾವಿಗೀಡಾದರು. ನಂತರ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.