

ಬೆಳಗಾವಿ: ಅಪರಿಚಿತ ವಾಹನ ಹಾಯ್ದು ಬೈಕ್ನಲ್ಲಿ ಹೊರಟಿದ್ದ ಸರ್ಹಾನಅಹ್ಮದ್ ಇರ್ಷಾದಅಹ್ಮದ್ ಪಿರಜಾದೆ (23) ಸ್ಥಳದಲ್ಲೇ ಮೃತಪಟ್ಟ ಟನೆ ಪುಣೆ&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಡೇಕೊಳ್ಳಮಠ ಕ್ರಾಸ್ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಅಪರಿಚತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹಿರೇಬಾಗೇವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.