ವಿದ್ಯುತ್​ ತಗುಲಿ ಯುವಕ ಮೃತ್ಯು

14Athanigramin2 CRIME
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಭಾನುವಾರ ವಿದ್ಯುತ್​ ತಗುಲಿ ಯುವಕ ಮಲ್ಲಿಕಾರ್ಜುನ ಸಂಜೀವ ಶಿವಾಪುರ (22) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಬ್ಬಿನ ಬೆಳೆಗೆ ನೀರುಣಿಸಲು ಪಂಪ್​ಸೆಟ್​ ಪ್ರಾರಂಭಿಸಲು ಹೋದಾಗ ವಿದ್ಯುತ್​ ತಗುಲಿ ಮತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್​ಐ ಗಿರಿಮಲ್ಲಪ್ಪ ಉಪ್ಪಾರ, ಎಎಸ್​ಐ ಡಿ.ಎಸ್​. ಚಿಕ್ಯಾಕುಂಡಿ, ತನಿಖಾಸಹಾಯಕ ಶ್ರೀನಾಥ ಅವಟಿ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net