

ಮಂಡ್ಯ: ಮದ್ದೂರು: ತಾಲೂಕಿನ ಈಡಿಗರದೊಡ್ಡಿಯ ( ಮದ್ದೂರು-ತುಮಕೂರು ರಸ್ತೆ) ಹೆದ್ದಾರಿಯಲ್ಲಿ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒರ್ವ ಸ್ಥಳದಲ್ಲೇ ಮೃತಪಟ್ಟಿ, ಇನ್ನೊಬ್ಬನಿಗೆ ತೀವ್ರವಾಗಿ ಗಾಯವಾಗಿರುವ ಘಟನೆ ಸೋಮವಾರ ಮುಂಜಾನೆ 5.30 ರ ಸುಮಾರಿಗೆ ನಡೆದಿದೆ.
ಘಟನೆಯಲ್ಲಿ ಎಳನೀರು ತುಂಬಿಕೊಂಡು ಹೋಗುತ್ತಿದ್ದ ಬೊಲೆರೋ ವಾಹನದ ಚಾಲಕ ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣದ ನಿವಾಸಿ ದಿಲೀಪ್ (೩೫) ಮೃತ ವ್ಯಕ್ತಿ. ತುಮಕೂರು ಕಡೆಯಿಂದ ದ್ರಾಕ್ಷಿ ತುಂಬಿಕೊಂಡು ಬರುತ್ತಿದ್ದ ಬೊಲೊರೊ ವಾಹನ ಹಾಗೂ ಮದ್ದೂರು ಕಡೆಯಿಂದ ಎಳನೀರು ತುಂಬಿಕೊಂಡು ಹೋಗುತ್ತಿದ್ದ ಬೊಲೆರೊ ವಾಹನಗಳ ನಡುವೆ ಮುಖಾಮುಖ ಸಂಭವಿಸಿ ಈ ಘಟನೆ ನಡೆದಿದೆ.
ಎಳನೀರು ತುಂಬಿದ್ದ ವಾಹನದಲ್ಲಿದ್ದ ದಿಲೀಪ್ ಮೃತಪಟ್ಟಿದ್ದು, ಇನ್ನೊಬ್ಬನಿಗೆ ತೀವ್ರ ಗಾಯಗೊಂಡಿದ್ದು ಅವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು ಹಾಗೂ ದ್ರಾಕ್ಷಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತು. ಸ್ಥಳಕ್ಕೆ ಕೆಸ್ತೂರು ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.