ಮನೆ ಮೇಲಿಂದ ಬಿದ್ದು ಯುವಕ ಸಾವು

Ramesh
Published on

ರಾಯಚೂರು: ನಿರ್ಮಾಣ ಹಂತದ ಮನೆ ಮೇಲಿಂದ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ನಗರದ ತಿಮ್ಮಾಪುರ ಪೇಟೆಯಲ್ಲಿ ಗುರುವಾರ ಜರುಗಿದ್ದು, ಯುವಕನ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತ ಯುವಕನನ್ನು ರಮೇಶ (19) ಎಂದು ಗುರುತಿಸಲಾಗಿದೆ. ಪಿಯುಸಿ ಮುಗಿಸಿ ಗಾರೆ ಕೆಲಸ ಮಾಡುತ್ತಿದ್ದ ರಮೇಶ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಮಲಗಿದ್ದು, ಗುರುವಾರ ಬೆಳಗ್ಗೆ ಪಕ್ಕದ ಮನೆ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.
ರಮೇಶನ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆ ಕಳುಹಿಸಲಾಗಿದೆ. ನೇತಾಜಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net