ಗುಂಡಿಯಲ್ಲಿ ಬಿದ್ದು ಯುವಕ ಸಾವು

9BNK01
Published on

ವಿಜಯವಾಣಿ ಸುದ್ದಿಜಾಲ ಬಂಕಾಪುರ

ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಿರ್ಮಾಣ ಹಂತದಲ್ಲಿದ್ದ ಟೋಲ್ ಪ್ಲಾಜಾದ ಕಾಮಗಾರಿಗಾಗಿ ತೋಡಲಾದ ಗುಂಡಿಯಲ್ಲಿ ಬಿದ್ದು ಯುವಕ ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕಳ್ಳೊಳ್ಳಿ ಗ್ರಾಮದ ಮೆಹಬೂಬ ಹಸನಸಾಬ್ ಜಮಾದಾರ (30) ಮೃತ ದುರ್ದೈವಿ. ಬಸ್​ನಲ್ಲಿ ಬೆಂಗಳೂರಿಗೆ ಹೊರಟಿದ್ದ ಯುವಕ,

ಬಂಕಾಪುರ ಟೋಲ್ ಗೇಟ್ ಹತ್ತಿರ ಬಸ್​ನಿಂದ ಇಳಿದು ನೀರಿನ ಬಾಟಲ್ ತರಲು ಹೋದಾಗ ಈ ಘಟನೆ ಸಂಭವಿಸಿದೆ.

ಟೋಲ್ ಪ್ಲಾಜಾ ಸಿಬ್ಬಂದಿ ಓಡಾಟಕ್ಕೆ ಅನುಕೂಲವಾಗಲಿ ಎಂದು ನೆಲದಡಿ ಅಂಡರ್​ಪಾಸ್ ನಿರ್ಮಾಣ ಮಾಡಲಾಗುತ್ತಿದೆ. ಇದರ ಪ್ರವೇಶಕ್ಕೆ ಬಿಟ್ಟಿರುವ ಜಾಗದಲ್ಲಿ ಯುವಕ ಬಿದ್ದಿದ್ದಾನೆ.

ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಹಾಕದಿರುವುದು ಹಾಗೂ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದ್ದು ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗುತ್ತಿಗೆ ಕಂಪನಿಗಳಾದ ಮೌಂಟ್ ಕಾಲೋಗೊ ಮತ್ತು ರೋಟೆಕ್ಸ್ ಜಿಯೋಟೆಕ್ನಿಕಲ್ ಪ್ರೖೆ.ಕಂ. ವಿರುದ್ಧ ಮೃತನ ಸಂಬಂಧಿಕರು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net