

ಮುರಗೋಡ: ಹೊಟ್ಟೆ ನೋವು ತಾಳಲಾರದೆ ಸ್ಥಳಿಯ ಹೊಸಪೇಟ ಓಣಿಯ ಯುವಕ ರಾಜು ಈರಪ್ಪ ಮಬನೂರ (22) ಬುಧವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವಕ ಸುಮಾರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಚಿಕಿತ್ಸೆ ಕೊಡಿಸಿದರೂ ಕಡಿಮೆಯಾಗದ ಕಾರಣ ಮನೆ ಪಕ್ಕದಲ್ಲಿರುವ ತಗಡಿ ಶೆಡ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು ತಿಳಿಸಿದ್ದಾರೆ.