ಕೆಲಸಕ್ಕೆ ಹೋಗಿ ದುಡಿ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ

Crime Logo
Published on

ಸವಣೂರ: ಕೆಲಸಕ್ಕೆ ಹೋಗಿ ದುಡಿ ಎಂದು ಬುದ್ದಿವಾದ ಹೇಳಿದ್ದಕ್ಕೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮಾಬುಸಾಬ ರಿಯಾಜಸಾಬ ಅಗಸನಮಟ್ಟಿ (24) ಮೃತ ಯುವಕ.

ಈತನಿಗೆ ಮನೆಯಲ್ಲಿ ತಂದೆ&ತಾಯಿ ಕೆಲಸಕ್ಕೆ ಹೋಗಿ ದುಡಿ ಎಂದು ಬುದ್ದಿವಾದ ಹೇಳಿದ್ದರಿಂದ ಬೇಸರಗೊಂಡು ಜಮೀನುವೊಂದರ ಬಳಿ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net