

ಧಾರವಾಡ: ಹಿಂದು ಯುವತಿಯರು ಮತ್ತು ಮಹಿಳೆಯರ ಮೊಬೈಲ್ ಫೋನ್‌ಗೆ ಮೆಸೇಜ್ ಮಾಡಿ ಪೀಡಿಸುತ್ತಿದ್ದ ಯುವಕನೊಬ್ಬನಿಗೆ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಇಲೆಕ್ಟಾçನಿಕ್ಸ್ ಉತ್ಪನ್ನಗಳ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಫಯಾಜ್ ಎಂಬಾತನನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಅಂಗಡಿಗೆ ಬರುತ್ತಿದ್ದ ಯುವತಿಯರು ಸಾಮಗ್ರಿ ಖರೀದಿ ವೇಳೆ ನೀಡುತ್ತಿದ್ದ ಮೊಬೈಲ್ ನಂಬರ್ ಪಡೆಯುತ್ತಿದ್ದ. ಬಹುತೇಕ ಹಿಂದು ಯುವತಿಯರು ಮತ್ತು ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರು. ಅವರ ಮೊಬೈಲ್ ಫೋನ್‌ಗೆ ಮೆಸೇಜ್ ಮಾಡಿ ಪೀಡಿಸುತ್ತ್ತಿದ್ದ ಎನ್ನಲಾಗಿದೆ. ಇದನ್ನು ಯುವತಿಯೊಬ್ಬಳು ಬಜರಂಗ ದಳ ಸಂಘಟನೆಯ ಕಾರ್ಯಕರ್ತರ ಗಮನಕ್ಕೆ ತಂದಿದ್ದಾಳೆ. ಅವರು ಮಳಿಗೆಗೆ ತೆರಳಿ ಫಯಾಜ್‌ಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಂದ ಉನಗರ ಠಾಣೆ ಪೊಲೀಸರು ಫಯಾಜ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.