ರೌಡಿಶೀಟರ್‌ನಿಂದ ಯುವಕನ ಮೇಲೆ ಹಲ್ಲೆ

crime
Published on

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ರೌಡಿಶೀಟರ್ ಮತ್ತು ಆತನ ಸಹಚರರು ಕೂಡಿ ಊಟ ಕೊಡದ್ದಕ್ಕೆ ನಗರದಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಮಹ್ಮದ್ ರಫಿಕ್ ಬಾರವಾಲೆ ಇತರ ಮೂವರು ಸೇರಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹ್ಮದ್ ಕೈಫ್ ಎನ್ನುವವನಿಗೆ ಊಟ ಕೊಡುತ್ತಿಯೋ ಇಲ್ಲವೋ ? ಎಂದು ಗದರಿಸಿದ್ದಾರೆ. ನಾವು ಯಾರು ಗೊತ್ತಾ ? ರೌಡಿಗಳು ಎಂದು ಧಮಕಿ ಹಾಕಿದ್ದಾರೆ. ಇವರೆಲ್ಲರೂ ಅಮಲಿನಲ್ಲಿ ಬಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾರವಾಲೆ ರೌಡಿಶೀಟರ್ ಆಗಿದ್ದು ಇತ್ತೀಚೆಗೆ ಗಡಿಪಾರು ಮಾಡಲಾಗಿತ್ತು ಎಂಬ ಮಾಹಿತಿ. ಹಲ್ಲೆ ಮಾಡಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಮರಿಪೇಟೆ ಪೊಲೀಸರು, ಬಂಧನಕ್ಕೆ ಜಾಲ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net