ದೀಪಾವಳಿ ಸಂಭ್ರಮದಲ್ಲೂ ಅಪ್ಪುವನ್ನು ಮರೆಯದ ಯುವತಿಯರು; ಹಿರಿಯರ ಸ್ಥಾನದಲ್ಲಿ ಪುನೀತ್‌ಗೂ ಪೂಜೆ; ಹೀಗೂ ಹಬ್ಬ ಆಚರಣೆ..

ಅಪ್ಪು 3
Published on

ವಿಜಯನಗರ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಈ ಯುವತಿಯರು ಆ ಖುಷಿಯಲ್ಲೂ ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯ ನೋವನ್ನು ಮರೆತಿಲ್ಲ. ಹಬ್ಬದ ಜೊತೆಜೊತೆಗೆ ಅವರನ್ನು ನೆನಪಿಸಿಕೊಂಡಿದ್ದು ಮಾತ್ರವಲ್ಲ, ತಮ್ಮ ಹಿರಿಯರ ಸ್ಥಾನದಲ್ಲಿರಿಸಿ ಪೂಜೆಯನ್ನೂ ಮಾಡಿದ್ದಾರೆ. ಆ ಮೂಲಕ ವಿಭಿನ್ನವಾಗಿ ಹಬ್ಬವನ್ನು ಆಚರಿಸಿದ್ದಾರೆ.

ವಿಜಯನಗರ ಜಿಲ್ಲೆಯ ತಾಂಡಾಗಳ ಯುವತಿಯರು  ಈ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿನ ಲಂಬಾಣಿ ಸಮುದಾಯದವರು ದೀಪಾವಳಿಯ ಸಂದರ್ಭದಲ್ಲಿ ಮಾಡುವ ಮೇರ (ಕಟೌಟ್‌ ಥರದ ಪ್ರತಿಮೆ) ಮತ್ತು ಹಿರಿಯರ ಪೂಜೆ ಜೋರಾಗಿರುತ್ತದೆ.

ಹೊಸಪೇಟೆ ತಾಲೂಕಿನ ಸೀತಾರಾಮ್‌ ತಾಂಡಾದ ಈ ಆಚರಣೆಯಲ್ಲಿ ಇಲ್ಲಿನ ಯುವತಿಯರು ಹಿರಿಯರಿಗೆ ಸಲ್ಲಿಸುವ ಪೂಜೆಯನ್ನು ಅಪ್ಪು ಫೋಟೋ ಇಟ್ಟು ಪೂಜಿಸುವ ಜತೆಗೆ ತಮ್ಮ ನೆಚ್ಚಿನ ನಟನಿಗೂ ಸಲ್ಲಿಸಿದ್ದಾರೆ. ಹೂವಿನ ಹಡಗಲಿ ತಾಲೂಕಿನ ಅಂಕ್ಲಿ ತಾಂಡಾದ ಯುವತಿಯರು ಪುನೀತ್‌ ರಾಜಕುಮಾರ್‌ಗೂ ಮೇರ ಮಾಡಿ ಪೂಜೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net