ಯುವ ಸಂಭ್ರಮಕ್ಕೆ ವಿಶೇಷ ಮಕ್ಕಳ ನೃತ್ಯದ ಮೆರಗು

28
Published on

ಮೈಸೂರು: ಒಂದೆಡೆ ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಸಂರಕ್ಷಣೆ, ದೇಶ ಭಕ್ತಿಗೀತೆ, ಕನ್ನಡ ಮತ್ತು ಸಂಸ್ಕೃತಿ ಬಿಂಬಿಸುವ ನೃತ್ಯಗಳ ಝಲಕ್.. ಇನ್ನೊಂದೆಡೆ ಶಿಳ್ಳೆ, ಚಪ್ಪಾಳೆ, ಚೀರಾಟಗಳ ಪ್ರೋತ್ಸಾಹ… ಅಷ್ಟೇ ಅಲ್ಲ, ವಿಶೇಷ ಮಕ್ಕಳ ನೃತ್ಯ ರೂಪಕ ‘ದಸರಾ ಯುವ ಸಂಭ್ರಮ’ದ 5ನೇ ದಿನದ ದಿನದ ಮೆರುಗು ಹೆಚ್ಚಿಸಿದವು.


ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಯುವಸಂಭ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.


ತಂಡೋಪತಂಡವಾಗಿ ಗಂಗೋತ್ರಿ ಅಂಗಳಕ್ಕೆ ಬಂದು ಸೇರಿದ್ದ ಯುವ ಪಡೆಗೆ ಕಲಾವಿದರೆಲ್ಲರೂ ರಸದೌತಣ ನೀಡಿದರು. ಸತತ ಐದನೇ ದಿನವೂ ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸಿದ್ದ 20ಕ್ಕೂ ಹೆಚ್ಚು ಕಾಲೇಜು ತಂಡಗಳು ಕನ್ನಡ ಪ್ರೇಮ, ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ಪೌರಾಣಿಕ, ಜಾನಪದ ನೃತ್ಯ ಸೇರಿದಂತೆ ಇತರ ವಿಷಯಗಳ ಬಗ್ಗೆ ನೃತ್ಯ ರೂಪಕ ಪ್ರದರ್ಶಿಸಿದರು. ದೇಶಪ್ರೇಮ ಸಾರುವ ಜತೆಗೆ ಪರಿಸರ ಕಾಳಜಿಯ ಬಗ್ಗೆ ಪಾಠ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net