ಕಚೇರಿ ಉದ್ಘಾಟನೆ ದಿನವೇ ಯುವ ಇಂಜಿನಿಯರ್‌ ಅಪಘಾತಕ್ಕೆ ಬಲಿ

Engineer
Published on

ಬೆಳ್ತಂಗಡಿ: ತಮ್ಮ ನೂತನ ಕಚೇರಿಯ ಉದ್ಘಾಟನಾ ದಿನದಂದೆ ಅಪಘಾತ ನಡೆದು ಯುವ ಇಂಜಿನಿಯರ್ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಇದು.

ಕಾರಿಂಜ ಮದ್ದ ನಿವಾಸಿ ಮಾಝಿನ್(28) ಎಂಬವರೇ ಮೃತ ಇಂಜಿನಿಯರ್. ಮದ್ದಡ್ಕದಲ್ಲಿ ತಮ್ಮ ಕಚೇರಿ ಉದ್ಘಾಟನೆಗೆ ತಯಾರಾಗುತ್ತಿದ್ದು ಮಡಂತ್ಯಾರು ಬಳಿ ಅರ್ತಿಲ ಎಂಬಲ್ಲಿ ಅಪರಿಚಿತ ವಾಹನ ಡಿಕ್ಕಿಹೊಡೆದು ಪರಾರಿಯಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net