3 ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕಟ್ಟೆ! ತುರುವೇಕೆರೆಯಲ್ಲಿ ದುರ್ಘಟನೆ

Untitled-1
Published on

ತುರುವೇಕೆರೆ: ಕಟ್ಟೆಯಲ್ಲಿ ಕುರಿಗಳ ಮೈತೊಳೆಯಲು ಹೋದ ಯುವ ದಂಪತಿ ದುರಂತ ಅಂತ್ಯ ಕಂಡ ಧಾರುಣ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿಯ ಮುಗಳೂರು ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಸಂಭವಿಸಿದೆ.

ಜಿಂಜೇಗೌಡ(25) ಮತ್ತು ಶಿವಲಿಂಗಮ್ಮ(22) ಮೃತ ದಂಪತಿ. ತಮ್ಮ ಹೊಲಕ್ಕೆ ಹೊಂದಿಕೊಂಡ ಕಟ್ಟೆಯಲ್ಲಿ ಗಂಪತಿ ಇಬ್ಬರೂ ಕುರಿಗಳ ಮೈತೊಳೆಯಲು ಹೋಗಿದ್ದರು. ಈ ವೇಳೆ ಇಬ್ಬರು ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಕೆಲ ಸಮಯದ ನಂತರ ಗ್ರಾಮದ ಕುರಿಗಾಹಿಗಳು ತಮ್ಮ ಕುರಿಗಳಿಗೆ ನೀರುಕುಡಿಸಲೆಂದು ಕಟ್ಟೆ ಬಳಿಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಟ್ಟೆಯ ದಡದಲ್ಲಿ ಬಳಿ ಜಿಂಜೇಗೌಡನ ಬಟ್ಟೆ, ವಾಚು, ಮೊಬೈಲ್​ ಮತ್ತು ಚಪ್ಪಲಿ ಇರುವುದನ್ನ ನೋಡಿ ಅನುಮಾನಗೊಂಡು ಕುರಿಗಾಹಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಬಳಿಕ ಕಟ್ಟೆಯಲ್ಲಿ ಶೋಧ ನಡೆಸಿದಾಗ ದಂಪತಿ ಶವಗಳು ಪತ್ತೆಯಾಗಿವೆ. ಜಿಂಜೇಗೌಡ ಮತ್ತು ಮತ್ತು ಶಿವಲಿಂಗಮ್ಮ 3 ವರ್ಷದ ಹಿಂದೆ ಮದುವೆಯಾಗಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸ್​ಐ ಹೊನ್ನೇಗೌಡ ಭೇಟಿ ನೀಡಿ ಪರಿಶೀಲಿಸಿದರು. ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net