ಗುರುಪುರ ನದಿಗೆ ಹಾರಿ ಯುವಕ ಆತ್ಮಹತ್ಯೆ

sucide
Published on


ಗುರುಪುರ: ಮಿಜಾರು ಬಳಿಯ ತೋಡಾರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹತ್ತಿರದ ಶಾಂತಿಗಿರಿ ನಿವಾಸಿ ದೀಪಕ್(21) ಎಂಬುವರು ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೂಡುಬಿದಿರೆ ಆಲಂಗಾರಿನಲ್ಲಿ ಕೆಲಸದ ಸಂದರ್ಶನವಿದೆಯೆಂದು ಸೋಮವಾರ ಮನೆಯವರಲ್ಲಿ ಹೇಳಿ ತೆರಳಿದ್ದರು. ಸಾಯಂಕಾಲ ಗುರುಪುರ ಸೇತುವೆಗೆ ಬಂದು ನದಿಗೆ ಹಾರಿದ್ದಾರೆ. ಮನೆಯವರು ಹುಡುಕಾಟ ನಡೆಸಿದಾಗ ಮಂಗಳವಾರ ಬೆಳಗ್ಗೆ ದೀಪಕ್ ಶವ ಗುರುಪುರ ನದಿಯಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ. ರಘು ಸಾಲ್ಯಾನ್ ನೇತೃತ್ವದ ತಂಡ ನದಿಯಿಂದ ಶವ ಮೇಲಕ್ಕೆತ್ತಿ ಜೈಶಂಕರ್ ಮಿತ್ರ ಮಂಡಳಿಯ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ದೀಪಕ್ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಕಾಲೇಜು ಮುಗಿದಿದ್ದರೂ ಕೆಲಸ ಸಿಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net