ರಾಮ ತೀರ್ಥದಲ್ಲಿ ಮುಳುಗಿ ಯುವಕ ಸಾವು

young boy died by drowning in Honnavara Ramatheertha
Published on

ಹೊನ್ನಾವರ: ಪಟ್ಟಣದ ರಾಮತೀರ್ಥ ಕೆರೆಯಲ್ಲಿ ಈಜಲು ಹೋದ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ರಾಯಲಕೇರಿಯ ಮಣಿಕಂಠ ಮಂಜುನಾಥ ನಾಯ್ಕ (17) ಮೃತಪಟ್ಟ ಯುವಕ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಈತ ಮಳೆಯ ಹಿನ್ನೆಲೆಯಲ್ಲಿ ಕಾಲೇಜು ರಜೆಯ ಇದ್ದ ಕಾರಣ ಸೋಮವಾರ ಮಧ್ಯಾಹ್ನ ಗೆಳೆಯರೊಡನೆ ರಾಮತೀರ್ಥಕ್ಕೆ ಹೋಗಿದ್ದನು. ಧಾರಾಕಾರ ಮಳೆಯ ನಡುವೆಯೇ ತುಂಬಿದ ರಾಮತೀರ್ಥ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ನೀಡಿದ ರಜೆಯನ್ನು ಅಪಾಯಕಾರಿ ಪ್ರವಾಸಕ್ಕೆ ಬಳಸಿಕೊಂಡು ಪ್ರಾಣಿಹಾನಿ ಮಾಡಿಕೊಳ್ಳುತ್ತಿರುವುದು ಪಾಲಕರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net