

ಉಡುಪಿ: ಕಲ್ಮಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಕೂಡುಕಟ್ಟು ವ್ಯಾಪ್ತಿಯಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಯುವ ಸಾಧಕರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಆವ್ನಿ ಗಣೇಶ್ ಬಗ್ಗುಮುಂಡ (ಕ್ರೀಡೆ), ಕಾರ್ತಿಕ್ ಪೂಜಾರಿ ಬಂಕೇರಕಟ್ಟ ಅಂಬಲಪಾಡಿ (ಪವರ್‌ಲಿಫ್ಟಿಂಗ್), ಮಲ್ಪೆಯ ವಾನ್ಸಿ ಜೆ. ಸುವರ್ಣ (ಬಾಕ್ಸಿಂಗ್), ಕೊಡವೂರು ನೆರ್ಗಿ ಪಡ್ಲದ ಡಾ.ಪೂಜಾ ಗೋಪಾಲ ಪೂಜಾರಿ (ಸಂಶೋಧನೆ), ಛಾಯಾ ಎಸ್. ಪೂಜಾರಿ ಬಾಪುತೋಟ (ಕರಾಟೆ) ಅವರನ್ನು ಅಭಿನಂದಿಸಲಾಯಿತು.
ಗರೋಡಿ ಆಡಳಿತ ಸಮಿತಿ ಗೌರವಾಧ್ಯಕ್ಷ ಅಚ್ಯುತ್ ಅಮೀನ್ ಕಲ್ಮಾಡಿ, ಅಧ್ಯಕ್ಷ ಶಶಿಧರ್ ಎಂ.ಅಮೀನ್ ವಡಭಾಂಡೇಶ್ವರ, ವಾಜಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪ್ರಧಾನ ಕಾರ್ಯದರ್ಶಿ ಮನೋಹರ್ ಜತ್ತನ್ ಮಲ್ಪೆ, ಜತೆ ಕಾರ್ಯದರ್ಶಿ ಶಿವಕುವಾರ್ ಅಂಬಲಪಾಡಿ, ಜತೆ ಕೋಶಾಧಿಕಾರಿ ಜಯಕರ ಪೂಜಾರಿ ಕೊಡವೂರು, ಸಂಟನಾ ಕಾರ್ಯದರ್ಶಿ ಮಧ್ವನಗರ ಶಂಕರ ಪೂಜಾರಿ, ಆಡಳಿತ ಸಮಿತಿ ಸದಸ್ಯರಾದ ಕಲ್ಮಾಡಿ ಶೇಖರ ಪೂಜಾರಿ, ಬಾಲಕೃಷ್ಣ ಕೊಡವೂರು, ವಿನಯಕುವಾರ್ ಪಡುಕರೆ, ಸತೀಶ್ ಬಂಗೇರ ಮಲ್ಪೆ, ಜಗದೀಶ್ ಬಂಗೇರ ಮಲ್ಪೆ, ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಗರೋಡಿ ಮನೆ ನಾರಾಯಣ ಪೂಜಾರಿ ಇತರರಿದ್ದರು.