ನೀವೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

18-DVD-2
ದೇವದುರ್ಗ ಠಾಣೆಯಲ್ಲಿ ಏರ್ಪಡಿಸಿದ್ದ ಪೊಲೀಸರಿಗೆ ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ಸಿಬ್ಬಂದಿ ಹೆಲ್ಮೆಟ್ ಧರಿಸಿ ಭಾಗವಹಿಸಿರುವುದು. ಪಿಐ ಎಸ್.ಮಂಜುನಾಥ ಇತರರಿದ್ದಾರೆ.
Published on

ದೇವದುರ್ಗ: ಸಾರ್ವಜನಿಕರು ಪೊಲೀಸರನ್ನು ಗಮನಿಸುತ್ತಾರೆ. ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಜನರಿಗೆ ಹೇಳದೆ ನೀವೂ ಮೊದಲು ಹೆಲ್ಮೆಟ್ ಹಾಕಿಕೊಂಡು ಮಾದರಿಯಾಗಬೇಕು ಎಂದು ಪಿಐ ಎಸ್.ಮಂಜುನಾಥ ಸೂಚಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಹಾಗೂ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬೈಕ್ ಸವಾರರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.

ನಿರ್ಲಕ್ಷ್ಯ ಮಾಡಿದರೆ ದಂಡ ವಸೂಲಿ ಮಾಡಲಾಗುವುದು. ಸಾರ್ವಜನಿಕ ಬೈಕ್ ಚೆಕ್ ಮಾಡುವ ಮುನ್ನ ಪೊಲೀಸರು ಸಂಚಾರ ನಿಯಮ ಪಾಲಿಸಬೇಕು. ಹೆಲ್ಮೆಟ್ ಧರಿಸಿಕೊಂಡು ಬೈಕ್ ರೈಡ್ ಮಾಡಬೇಕು. ಇದು ಇತರರಿಗೆ ಪ್ರೇರಣೆಯಾಗಲಿದೆ ಎಂದರು. ಪೇದೆಗಳಾದ ಮಹೇಶ, ಹನುಮಂತ, ರಾಘವೇಂದ್ರ, ಸುರೇಶ, ಪ್ರಭುಗೌಡ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net