

ರಾಮದುರ್ಗ: ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡರೆ, ಸಮಾಜದಲ್ಲಿ ಉತ್ತಮ ನಾಗರಿಕರೆನಿಸಿಕೊಳ್ಳಲು ಸಾಧ್ಯ ಎಂದು ವಿರಕ್ತಮಠದ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಹೇಳಿದರು.
ಸ್ಥಳೀಯ ವಿಶ್ವ ಭಾರತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎನ್‌ಎಸ್‌ಎಸ್ ಕಾರ್ಯಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಶಾಸಕ ಅಶೋಕ ಪಟ್ಟಣ ಕುಟುಂಬ ವತಿಯಿಂದ ವಿದ್ಯಾರ್ಥಿಗಳಿಗೆ ಸಹಕಾರ ನೀಡಲು ಸಿದ್ಧರಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಿಪಿಐ ವಿನಾಯಕ ಬಡಿಗೇರ ಮಾತನಾಡಿ, ಅತಿಯಾದ ಮೊಬೈಲ್ ಬಳಕೆಯಿಂದ ದಿನೆ ದಿನೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು ಅವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿದರು. ಶಾಸಕ ಅಶೋಕ ಪಟ್ಟಣ ಕುಟುಂಬ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಿಸಲಾಯಿತು.
ಪ್ರಾಚಾರ್ಯ ಅಶೋಕ ಹೊಸಮನಿ ಮಾತನಾಡಿದರು.
ಶಿವಪ್ಪ ಮಾಳಿ, ಆರ್.ಎಲ್.ಕರ್ಲೆಪ್ಪನವರ, ರವಿ ಬಡಿಗೇರ, ಜ್ಯೋತಿ ಸತ್ತಿಗೇರಿ, ವಿ.ಎಸ್.ಕಿಲಬನೂರ, ವಿ.ಬಿ.ಸೋಮಣ್ಣವರ, ಕವಿತಾ ಕುಲಕರ್ಣಿ, ಗೋಪಾಲ ರಾಠೋಡ, ಮಾರುತಿ ಹೊಸಮನಿ, ಮಂಜುನಾಥ ಮೊಹಿತೆ ಇತರರಿದ್ದರು. ಆರ್.ಬಿ.ಸವಟಗಿ ಸ್ವಾಗತಿಸಿದರು. ಮಲ್ಲಿಕಾರ್ಜುನರಡ್ಡಿ ಗೊಂದಿ ನಿರೂಪಿಸಿದರು. ಐಶ್ವರ್ಯ ಬಡಿಗೇರ ವಂದಿಸಿದರು.