ಸಂತೆ ತಡೆಗೆ ಪೊಲೀಸ್ರ ಹರಸಾಹಸ

3003DHL2
Published on

ದೋರನಹಳ್ಳಿ: ಸಾಮಾಜಿಕ ಅಂತರದಿಂದ ಮಾತ್ರ ಕರೊನಾ ವೈರಸ್ ಹರಡುವಿಕೆ ತಡೆಯಲು ಸಾಧ್ಯ. ಇಲ್ಲವಾದರೆ ಅದು ಹೆಚ್ಚಾಗಿ ಸಾವಿನ ಸಂತೆ ನಡೆಯುತ್ತದೆ. ನೀವು ಸಾಯಿವುದಲ್ಲದೆ ಎಲ್ಲರನ್ನೂ ಸಾಯಿಸ್ತೀರಿ ಎಂದು ಪಿಎಸ್ಐ ಚಂದ್ರಕಾಂತ ಮೆಕಾಲೆ ಹೇಳಿದರು.

ದೋರನಹಳ್ಳಿ ವಾರದ ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಜನರನ್ನು ಕಂಡು ಕೆಂಡಾಮಂಡಲವಾದ ಅವರು, ಗ್ರಾಮದಲ್ಲಿ ವಾರದ ಸಂತೆ ನಿಷೇಧದ ನಡುವೆಯೂ ಎಂದಿನಂತೆ ಸಂತೆ ನಡೆದಿತ್ತು. ಕೂಡಲೇ ಅವರನ್ನು ಚದುರಿಸಲಾಯಿತು ಎಂದರು.

ಕಂದಾಯ ಅಧಿಕಾರಿ ದೇವರಾಜ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಭೀಮರೆಡ್ಡಿ ಹೊಸಮನಿ ಸಂತೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಸಂತೆ ನಿಷೇಧವಿದೆ. ಗುಂಪು ಗುಂಪಾಗಿ ಮಾರುವಂತಿಲ್ಲ. ಕೈ ಬಂಡಿಯಲ್ಲಿಟ್ಟು ಗ್ರಾಮದಲ್ಲಿ ಸುತ್ತಾಡಿ ಮಾರಾಟ ಮಾಡಿ. ನೀವು ಇಲ್ಲಿ ಕುಳಿತು ಮಾರಾಟ ಮಾಡಿದರೆ ಜನರು ಗುಂಪಾಗುತ್ತಾರೆ ಎಂದು ತಿಳಿ ಹೇಳಿದರು .

ಗ್ರಾಪಂನ ಕಾರ್ಯದರ್ಶಿ ಲಕ್ಷ್ಮಣ ಹಾಗೂ ಸಿಬ್ಬಂದಿಗಳು ಎಷ್ಟು ಹೇಳಿದರು ಕೇಳದ ವ್ಯಾಪಾರಸ್ಥರು ವ್ಯಾಪಾರ ಶುರು ಮಾಡಿದ್ದರು.

ಕೂಡಲೇ ಗ್ರಾಪಂ ಆಡಳಿತ ಮಂಡಳಿ ಶಹಾಪುರ ಪೊಲೀಸ್ರಿಗೆ ತಿಳಿಸುತ್ತಿದ್ದಂತೆ ಪಿಎಸ್ಐ ಚಂದ್ರಕಾಂತ ಮೆಕಾಲೆ ಪೇದೆಗಳಾದ ಬಿ.ಜಿ.ಹಿರೇಮಠ, ಸಂಗನಬಸ್ಸಪ್ಪ ಅಕ್ಕಿ, ಹೊನ್ನಪ್ಪ ಭಜಂತ್ರಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ನೇತೃತ್ವದ ತಂಡ ಆಗಮಿಸುತ್ತಿದ್ದಂತೆ ಹೌಹಾರಿದ ವ್ಯಾಪಾರಸ್ಥರು ತಮ್ಮ ತರಕಾರಿಯನ್ನು ಬಿಟ್ಟು ಓಡಿ ಹೋದರು. ಗ್ರಾಪಂ ಸದಸ್ಯ ಬಸವರಾಜ ಸಿ ಆಂದೇಲಿ, ಸಿಬ್ಬಂದಿಗಳಾದ ಅಮರ, ಭೀಮರಾಯ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net