

ತೇರದಾಳ: ಜಗತ್ತು ಸ್ಪರ್ಧಾತ್ಮಕವಾಗಿದ್ದು ಇಲ್ಲಿ ಸ್ಪರ್ಧಿಸಲು ಮಾತೃಭಾಷೆಯ ಜತೆಗೆ ಇಂಗ್ಲೀಷ ಶಿಕ್ಷಣ ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಾಧನೆಗೆ ಪೂರಕ ವಿಷಯಗಳನ್ನು ಅಳವಡಿಸಿಕೊಂಡು ಸವಾಲು ಎದುರಿಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕು. ಜ್ಞಾನದ ಹಸಿವಿದ್ದಾಗ ಮಾತ್ರ ಓದುವ ಹವ್ಯಾಸವಿರಲು ಸಾಧ್ಯ ಎಂದು ಶಿಕ್ಷಣ ತಜ್ಞ ವಿನಯ ಪಾಟೀಲ ಹೇಳಿದರು.
ಪಟ್ಟಣದ ಡಾ. ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ಸಂಸ್ಥೆಯು ಪ್ರತಿಯೊಂದರಲ್ಲೂ ಹೊಸ ಚಿಂತನೆಯ ಅವಿಷ್ಕಾರವನ್ನು ಪ್ರಯತ್ನಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹಿಸುವ ಉತ್ತಮ ಶಿಕ್ಷಕ ವೃಂದವಿದೆ. ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.
ಮಾಜಿ ಸಚಿವ ಮುರಗೇಶ ನಿರಾಣಿ, ವೆಂಕಟೇಶ್ವರ ರಾವ ಕೌಶಿಕ್, ಡಾ. ಮಹಾವೀರ ದಾನಿಗೊಂಡ, ಸಿತಾರಾಮರಾವ ನಂದೂರಿ, ಮಾತನಾಡಿದರು.ಪ್ರದೀಪ ಪಾಟೀಲ ಮತ್ತಿತರರಿದ್ದರು.