ಇಚ್ಛೆ ಇರುವ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು

25 ckm 5
ಚಿಕ್ಕಮಗಳೂರಿನ ಹೋಟೆಲ್ ಸಭಾಂಗದಲ್ಲಿ ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ನ್ಯಾಷನಲ್ ನೆಟ್ವರ್ಕ್ ಆಫ್ ಸೆಕ್ಸ್ ವರ್ಕರ್ಸ್ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ವಕಾಲತ್ತಿನ ಸಭೆಯನ್ನುz್ದೆÃಶಿಸಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿದರು.
Published on

ಚಿಕ್ಕಮಗಳೂರು: ಸಮಾಜದಲ್ಲಿ ಪ್ರತಿಯೊಬ್ಬರು ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವ ಜೊತೆಗೆ ತನಗೆ ಇಚ್ಛೆ ಇರುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ವಿ.ಹನುಮಂತಪ್ಪ ತಿಳಿಸಿದರು.

ನಗರದ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ನ್ಯಾಷನಲ್ ನೆಟ್ವರ್ಕ್ ಆಫ್ ಸೆಕ್ಸ್ ವರ್ಕರ್ಸ್ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ವಕಾಲತ್ತಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ವ್ಯಕ್ತಿಗೆ ಯಾವುದೇ ವೃತ್ತಿಯನ್ನು ಮಾಡುವ ಅವಕಾಶವಿದೆ. ಆದರೂ ನೈತಿಕತೆಯ ಆಧಾರದ ಮೇಲೆ ಕೆಲ ಸಮುದಾಯಗಳು ನಡೆಸುತ್ತಿರುವ ವೃತ್ತಿಯನ್ನು ಕೀಳು ಎಂದು ನೋಡುವ ಮನಸ್ಥಿತಿಗಳು ನಮ್ಮಲ್ಲಿ ಇವೆ. ಇವುಗಳನ್ನು ಹೋಗಲಾಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಹಿಂದೆ ದೇಶದಲ್ಲಿ ದೇವದಾಸಿ ವ್ಯವಸ್ಥೆ ಜಾರಿಯಲ್ಲಿತ್ತು. ಅದನ್ನು ಕಾಯ್ದೆಗಳ ಮೂಲಕವೇ ನಿರ್ಮೂಲನೆ ಮಾಡಲಾಗಿದೆ. ಈ ಪದತಿಯಲ್ಲಿ ದೇವರ ಹೆಸರಿನಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ನಮ್ಮದು ಪುರುಷ ಪ್ರಧಾನ ಸಮಾಜ ವಾಗಿದ್ದರಿಂದ ಹೆಣ್ಣನ್ನು ಬ್ರೂಣದಲ್ಲಿಯೇ ಕೊಲ್ಲಲಾಗುತ್ತಿತ್ತು. ಆದರೆ ಎಲ್ಲದಕ್ಕೂ ಹೆಣ್ಣೇ ಬೇಕಿತ್ತು. ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ತಿಳಿಸಿದರು.
ಸಂಗಮ ಸಂಘಟನೆಯ ಕಾರ್ಯಕಾರಿ ನಿರ್ದೇಶಕ ರಾಜೇಶ್ ಶ್ರೀನಿವಾಸ್ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರು ಮೈ ಮಾರಿಕೊಳ್ಳುತ್ತಿದ್ದಾರೆ ಎಂದು ಸಮಾಜ ತಿಳಿದುಕೊಂಡಿದೆ. ಆದರೆ ಬಡತನ ಹಾಗೂ ಕುಟುಂಬ ನಿರ್ವಹಣೆಗಾಗಿ ಅನಿವಾರ್ಯವಾಗಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿಯೊಂದು ವೃತ್ತಿಗೂ ಗೌರವ ಸಲ್ಲಿಸಿದಂತೆ ಲೈಂಗಿಕ ಕಾರ್ಯಕರ್ತರಿಗೂ ಗೌರವ ಸೂಚಿಸಬೇಕು ಎಂದರು.
ಸುಪ್ರೀA ಕೋರ್ಟ್ ಆದೇಶದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲೈಂಗಿಕ ಅಲ್ಪಸಂಖ್ಯಾತರ ಗೆ ಸವಲತ್ತು ಹಾಗೂ ಸೌಕರ್ಯ ಒದಗಿಸಬೇಕು. ಪ್ರಪಂಚದ ಹಲವು ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನಿನಡಿ ವೃತ್ತಿ ನಡೆಸಲು ಅವಕಾಶವಿದೆ. ಆದರೆ ಭಾರತದಲ್ಲಿ ಮಾತ್ರ ಈ ವೃತ್ತಿ ಮಾಡುತ್ತಿರುವವರನ್ನು ಅಪರಾಧಿಗಳು ಎನ್ನುವಂತೆ ನೋಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮೇಘ ಮಲ್ನಾಡ್, ಭಾರತಿ, ಫಾತಿಮತ್ ನಾಜಿಯ, ಮುಕ್ತಾ ಪೂಜಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net