

ಬ್ಯಾಡಗಿ: ಯೋನೋ ಆಪ್ ಅಪಡೇಟ್ ಮಾಡಿಕೊಡುವ ನೆಪದಲ್ಲಿ ವೃದ್ಧರೊಬ್ಬರಿಗೆ 4.99 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಶಿಡೇನೂರ ಗ್ರಾಮದ ವೀರಪ್ಪ ಚನ್ನಬಸಪ್ಪ ಯೋಗಿಕೊಪ್ಪದ (75) ಎಂಬುವರಿಗೆ ಮೋಸ ಮಾಡಿರುವುದು.
ಅಪರಿಚಿತ ವ್ಯಕ್ತಿಯೊಬ್ಬ ಇವರ ಮೊಬೈಲ್ನ ವಾಟ್ಸ್ಅಪ್ಗೆ ಲಿಂಕ್ವೊಂದನ್ನು ಕಳುಹಿಸಿ ಯೋನೋ ಆಪ್ ಅನ್ನು ಅಪಡೇಟ್ ಮಾಡಿವುದಾಗಿ ನಂಬಿಸಿದ್ದಾನೆ. ಅದರಂತೆ ವೀರಪ್ಪ ಅವರನ್ನು ಲಿಂಕ್ ಓಪನ್ ಮಾಡುತ್ತಿದ್ದಂತೆ ಅವರ ಖಾತೆಯಲ್ಲಿದ್ದ 4.99 ಲಕ್ಷ ರೂ. ಬೇರೊಂದು ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.